ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ಕಾಂಗ್ರೆಸ್‌ನ ಹರಿಯಾಣ ಶಾಸಕ ಧರಂ ಸಿಂಗ್ ಚೋಕರ್ ಮತ್ತು ಅವರ ಮಾಲೀಕತ್ವ ಮತ್ತು ನಿಯಂತ್ರಣ ಕಂಪನಿಗಳ ಮೇಲೆ ಇಂದು ಇಡಿ ದಾಳಿ ನಡೆದಿದೆ.
4 ಕೋಟಿ ರೂಪಾಯಿ ಮೌಲ್ಯದ ಕಾರು, ಚಿನ್ನಾಭರಣ, ನಗದು ಸೇರಿದಂತೆ ಹಲವು ವಸ್ತುಗಳನ್ನು ಇಡಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಮನೆ ಖರೀದಿಸುವವರ ಹಣವನ್ನು ಅಕ್ರಮವಾಗಿ ವರ್ಗಾಯಿಸಿದ್ದಾರೆ ಅನ್ನೋ ಆರೋಪ ಗಂಭೀರವಾಗಿದೆ. ಈ ಪ್ರಕರಣದ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ ಇಂದು ಧರಮ್ ಸಿಂಗ್ ಛೋಕರ್‌ಗೆ ಸೇರಿದ 11 ವಿವಿಧ ಕಡೆಗಳಲ್ಲಿರುವ ಕಂಪನಿಗಳು, ಕಚೇರಿಗಳು ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದೆ. ಐಷಾರಾಮಿ ಕಾರುಗಳು, 14.5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ, 4.5 ಲಕ್ಷ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಹರ್ಯಾಣ, ಗುರುಗ್ರಾಂ, ದೆಹಲಿ ಸೇರಿದಂತೆ 11 ಕಡೆಗಳಲ್ಲಿ ಧರಮ್ ಸಿಂಗ್ ಆಸ್ತಿ ಹಾಗೂ ಕಂಪನಿಗಳನ್ನು ಹೊಂದಿದ್ದಾರೆ. ಹರ್ಯಾಣದ ಪಾನಿಪತ್ ಜಿಲ್ಲೆಯ ಸಮಲ್ಖಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಧರಮ್ ಸಿಂಗ್ ಛೋಕರ್, ಮಹಿರಾ ರಿಯಲ್ ಎಸ್ಟೇಟ್ ಗ್ರೂಪ್ ಮಾಲೀಕರಾಗಿದ್ದಾರೆ. ಗುರುಗ್ರಾಮ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಆಧಾರದಲ್ಲಿ ಇಡಿ ಅಧಿಕಾರಿಗಳು ತನಿಖೆ ಆರಂಭಿಸಿದ್ದರು.
ಧರಮ್ ಸಿಂಗ್ ಛೋಕರ್ ರಿಯಲ್ ಎಸ್ಟೇಟ್ ಮೂಲಕ 1497 ಮನೆಗಳ ಮಾರಾಟದಲ್ಲಿ 360 ಕೋಟಿ ರೂಪಾಯಿ ಗೋಲ್‌ಮಾಲ್ ನಡೆದಿದೆ. ಸಾರ್ವಜನಿಕರಿಂದ ಹಣ ಪಡೆದು ವಂಚಿಸಲಾಗಿದೆ ಎಂದು ಠಾಣೆಯಲ್ಲಿ ದೂರು ದಾಖಲಾಗಿತ್ತು.
ಹರ್ಯಾಣದಲ್ಲಿ ಬೃಹತ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದ ಧರಮ್ ಸಿಂಗ್ ಛೋಕರ್, 2019ರಲ್ಲಿ ಹರ್ಯಾಣ ವಿಧಾನಸಭೆಗೆ ಸ್ಪರ್ಧಿಸಿದ್ದಾರೆ. ಇದೇ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದ ಧರಮ್ ಸಿಂಗ್,ಕ್ಯಾಬಿನ್‌ನಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ವಿಫಲರಾಗಿದ್ದರು. ಶಾಸಕರಾಗಿರುವ ಧರಮ್ ಸಿಂಗ್ ಇದೀಗ ಕೋಟಿ ಕೋಟಿ ರೂಪಾಯಿ ಹಗರಣದಲ್ಲಿ ಸಿಲುಕಿದ್ದಾರೆ.