ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಕಂಗನಾ ರಣಾವತ್‌ಗೆ ನೀಡಿರುವ ವೈ ಪ್ಲಸ್ ಸೆಕ್ಯುರಿಟಿ ಬಗ್ಗೆ ಸುಬ್ರಮಣ್ಯನ್ ಸ್ವಾಮಿ ಪ್ರಶ್ನೆ ಮಾಡಿದ್ದು , ಈಕೆ ಎಲ್ಲಿದ್ದಾರೆ ಎನ್ನುವುದು ಸ್ಪೆಷಲ್ ಪ್ರೊಟಕ್ಷನ್ ಗ್ರೂಪ್‌ಗೆ (ಎಸ್‌ಪಿಜಿ) ಮಾತ್ರವೇ ತಿಳಿದಿರುತ್ತದೆ ಎಂದು ಟ್ವೀಟ್ ಮಾಡಿದ್ದರು.
‘ಇದು ಎಸ್‌ಪಿಜಿಗೆ ಮಾತ್ರವೇ ಗೊತ್ತಿರಲಿ ಸಾಧ್ಯ. ಆಕೆಯ ಚಲನವಲಗಳನ್ನು ಅವರು ರಿಜಿಸ್ಟರ್ ಮಾಡಿ ಇಟ್ಟುಕೊಂಡಿರುತ್ತಾರೆ. ಬಾಲಿವುಡ್ ಸ್ಟಾರ್‌ಅನ್ನು ಟ್ರ್ಯಾಕ್ ಮಾಡುವುದು ಎಸ್‌ಪಿಜಿಯ ಕೆಲಸವಲ್ಲ. ಹಾಗಿದ್ದರೂ ಆಕೆಗೆ ಈ ಭದ್ರತೆ ನೀಡಿರುವುದು ಅಚ್ಚರಿ ತಂದಿದೆ. ಈಕೆಯ ವಿಚಾರ ಹೇಳುವುದಾದರೆ, ವಿಶೇಷ ಸಂದರ್ಭದಲ್ಲಿ ಆಕೆಗೆ ಹೆಚ್ಚಿನ ಮಟ್ಟದ ಭದ್ರತೆಯನ್ನು ಒದಗಿಸಲಾಗಿದೆ ಎಂದು ಅವರು ಟ್ವೀಟ್ ಮಾಡಿದ್ದರು .
ಸುಬ್ರಮಣ್ಯನ್ ಸ್ವಾಮಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ಕಂಗನಾ ರಣಾವತ್ , ನಾನು ಕೇವಲ ಬಾಲಿವುಡ್ ಸ್ಟಾರ್ ಮಾತ್ರವೇ ಅಲ್ಲ ಎಂದಿದ್ದಾರೆ.
‘ನಾನು ಕೇವಲ ಬಾಲಿವುಡ್ ಸ್ಟಾರ್ ಅಲ್ಲ ಸರ್, ನಾನು ತುಂಬಾ ಬಡವರ ಪರ ದನಿ ಎತ್ತುವ ಮತ್ತು ಕಾಳಜಿಯುಳ್ಳ ನಾಗರಿಕ, ನಾನು ಮಹಾರಾಷ್ಟ್ರದಲ್ಲಿ ರಾಜಕೀಯ ದುರುದ್ದೇಶಕ್ಕೆ ಗುರಿಯಾಗಿದ್ದೇನೆ, ನನ್ನ ವೆಚ್ಚದಲ್ಲಿ ರಾಷ್ಟ್ರೀಯವಾದಿಗಳು ಇಲ್ಲಿ ಸರ್ಕಾರ ಮಾಡಬಹುದು. ನಾನು ತುಕ್ಡೆ ಗ್ಯಾಂಗ್ ಬಗ್ಗೆ ಮಾತನಾಡಿದ್ದೇನೆ ಮತ್ತು ಖಲಿಸ್ತಾನಿ ಗುಂಪುಗಳನ್ನು ಬಲವಾಗಿ ಖಂಡಿಸಿದ್ದೇನೆ. ನಾನು ಚಲನಚಿತ್ರ ನಿರ್ಮಾಪಕಿ, ಬರಹಗಾರ್ತಿ. ನನ್ನ ಮುಂದಿನ ನಿರ್ಮಾಣದ ಸಿನಿಮಾ ತುರ್ತು ಪರಿಸ್ಥಿತಿಯ ಬ್ಲೂಸ್ಟಾರ್ ಅನ್ನು ಒಳಗೊಂಡಿರುತ್ತದೆ ನನ್ನ ಜೀವಕ್ಕೆ ಸ್ಪಷ್ಟವಾದ ಬೆದರಿಕೆ ಇದೆ. ಆದ್ದರಿಂದ ನಾನು ವಿಸ್ತೃತ ಭದ್ರತೆಗಾಗಿ ವಿನಂತಿಸಿದೆ … ಇದರಲ್ಲಿ ಏನಾದರೂ ತಪ್ಪಾಗಿದೆಯೇ ಸರ್?’ ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಸೇನಾ ನಾಯಕ ಸಂಜಯ್ ರಾವತ್ ಅವರೊಂದಿಗೆ ವಾಕ್ಸಮರದ ನಂತರ ಮತ್ತು ತಾನು ಅಸುರಕ್ಷಿತ ಎಂದು ಭಾವಿಸಿದ ನಂತರ ನಟಿಗೆ ಗೃಹ ಸಚಿವಾಲಯ (MHA) ಸಿಆರ್‌ಪಿಎಫ್ ಭದ್ರತೆಯ ವೈ-ಪ್ಲಸ್ ವರ್ಗವನ್ನು ಒದಗಿಸಿದೆ.