ಹೊಸದಿಗಂತ ಡಿಜಿಟಲ್ ಡೆಸ್ಕ್:
ಈಗಾಗಲೇ ಜನಸಾಮಾನ್ಯರಿಗೆ ತಲೆನೋವಾಗಿರುವ ಹಾಲಿನ ದರ ಹೆಚ್ಚಳ ಮುಂಗಾರು ಹಂಗಾಮಿನ ಬಳಿಕ ಕಡಿಮೆಯಾಗುವ ನಿರೀಕ್ಷೆಯಿದೆ.
ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪುರುಶೋತ್ತಮ ರೂಪಾಲಾ ಮಾತನಾಡಿ, ಮಳೆಗಾಲದ ನಂತರ ಹಾಲಿನ ದರ ಇಳಿಕೆಯಾಗುವ ಸಾಧ್ಯತೆ ಇದೆ ಎಂಬ ಮಾತನ್ನು ಹೇಳಿದ್ದಾರೆ.
ಹವಾಮಾನ ವೈಪರೀತ್ಯದಿಂದ ಬೆಳೆ ಹಾನಿಯಾಗುತ್ತಿದ್ದರೂ ಈಗ ಆತಂಕ ಪಡುವ ಅಗತ್ಯವಿಲ್ಲ ಎಂದು ರೂಪಾಲಾ ತಿಳಿಸಿದರು. ಮೇವಿನ ಕೊರತೆ ಇಲ್ಲ, ರಾಜ್ಯಗಳು ಸಾಕಷ್ಟು ದಾಸ್ತಾನು ಹೊಂದಿದ್ದು, ಹಾಲು ಉತ್ಪಾದಕತೆಯನ್ನು ಸುಧಾರಿಸಲು ಹವಾಮಾನ-ಸಹಿಷ್ಣು ತಳಿಗಳ ಮೇಲೆ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.