ಹೊಸದಿಗಂತ ಡಿಜಿಟಲ್ ಡೆಸ್ಕ್:
31 ಜುಲೈ 2023 ರ ವೇಳೆಗೆ 2000 ರೂಪಾಯಿ ನೋಟುಗಳಲ್ಲಿ 88 ಪ್ರತಿಶತಷ್ಟು ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿದೆ ಎಂದು ಆರ್ಬಿಐ ಹೇಳಿದೆ. ಮೇ 19, 2023 ರಂದು ಆರ್ಬಿಐ 2,000 ರೂ ನೋಟುಗಳ ಅಮಾನ್ಯೀಕರಣದ ಘೋಷಣೆಯ ನಂತರ, 88 ಪ್ರತಿಶತ ನೋಟುಗಳು ಹಿಂತಿರುಗಿವೆ.
RBI ಪ್ರಕಾರ.. ಜುಲೈ 31, 2023 ರ ವೇಳೆಗೆ ರೂ.3.14 ಲಕ್ಷ ಕೋಟಿ ಮೌಲ್ಯದ ರೂ.2000 ನೋಟುಗಳು ಬ್ಯಾಂಕ್ಗಳಿಗೆ ಹಿಂತಿರುಗಿವೆ. ಈಗ ಕೇವಲ ರೂ.42,000 ಕೋಟಿ ನೋಟುಗಳು ಚಲಾವಣೆಯಲ್ಲಿವೆ. 30 ಸೆಪ್ಟೆಂಬರ್ 2023ರ ವೇಳೆಗೆ ನಿರೀಕ್ಷೆ ಮಟ್ಟದ ಹಣ ವಾಪಸಾಗುವುದು ಎಂದು ಆರ್ಬಿಐ ಹೇಳಿದೆ.
ಹಿಂದಿರುಗಿದ 2000ರೂ ನೋಟುಗಳಲ್ಲಿ 87 ಪ್ರತಿಶತವನ್ನು ಬ್ಯಾಂಕ್ ಖಾತೆಗಳಲ್ಲಿ ಠೇವಣಿ ಮಾಡಲಾಗಿದೆ ಎಂದು ಆರ್ಬಿಐ ಬಹಿರಂಗಪಡಿಸಿದೆ. 13 ರಷ್ಟು 2000 ರೂಪಾಯಿ ನೋಟುಗಳನ್ನು ಇತರ ನೋಟುಗಳೊಂದಿಗೆ ವಿನಿಮಯ ಮಾಡಿಕೊಳ್ಳಲಾಗಿದೆ. 2000 ರೂಪಾಯಿ ನೋಟುಗಳನ್ನು ಠೇವಣಿ ಇಡಲು ಅಥವಾ ಬದಲಾಯಿಸಿಕೊಳ್ಳಲು ಇನ್ನೂ ಎರಡು ತಿಂಗಳ ಕಾಲಾವಕಾಶವಿದ್ದು, ಕೂಡಲೇ ಈ ಕೆಲಸ ಮಾಡುವಂತೆ ಸಾರ್ವಜನಿಕರಿಗೆ ಮನವಿ ಮಾಡಿದೆ. ಕೊನೆಯ ಕ್ಷಣದಲ್ಲಿ ಪರದಾಡುವ ಬದಲು 30 ಸೆಪ್ಟೆಂಬರ್ 2023 ರೊಳಗೆ ನೋಟುಗಳನ್ನು ಠೇವಣಿ ಮಾಡಲು ಅಥವಾ ವಿನಿಮಯ ಮಾಡಿಕೊಳ್ಳುವಂತೆ ಸೂಚಿಸಿದೆ.