RECIPE| ಕುಂಬಳಕಾಯಿ ತಿರುಳಿನಿಂದ ಮಾಡಿ ನೋಡಿ ರುಚಿಕರವಾದ ದೋಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರತಿನಿತ್ಯ ಆರೋಗ್ಯಕರ ಆಹಾರ ಸೇವಿಸುವುದು ನಮ್ಮೆಲ್ಲರ ಜವಾಬ್ದಾರಿ. ಈ ಜವಾಬ್ದಾರಿಯ ಪಟ್ಟಿಯಲ್ಲಿ ಸೇರಿಸಿ ನೋಡಿ ಕುಂಬಳಕಾಯಿ ತಿರುಳಿನಿಂದ ಮಾಡಿದ ರುಚಿಕರವಾದ ದೋಸೆ. ಇದನ್ನು ಮಾಡಲು ಏನೆಲ್ಲಾ ಸಾಮಾಗ್ರಿಗಳು ಬೇಕು ಮತ್ತು ಅದನ್ನು ತಯಾರಿಸುವುದು ಹೇಗೆ ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಾಗ್ರಿಗಳು:

*ಬೆಳ್ತಿಗೆ ಅಕ್ಕಿ
*ಕುಂಬಳ ಕಾಯಿ ತಿರುಳು
*ಮೆಂತೆ
*ಮೊಸರು
*ಉಪ್ಪು
*ಎಣ್ಣೆ

ಮಾಡುವ ವಿಧಾನ:

* ಮೊದಲು ಮೆಂತ್ಯೆ ಮತ್ತು ಅಕ್ಕಿಯನ್ನು 4-5 ಗಂಟೆಗಳ ಕಾಲ ನೆನೆಯಲು ಇಡಿ. ನಂತರ ಅಕ್ಕಿಯನ್ನು ಚೆನ್ನಾಗಿ ತೊಳೆದು ಪಕ್ಕದಲ್ಲಿಡಿ.
* ಕುಂಬಳಕಾಯಿ ತಿರುಳನ್ನು ಬೇರ್ಪಡಿಸಿ ನಂತರ ಅದನ್ನು ಚೆನ್ನಾಗಿ ತೊಳೆಯಿರಿ.
* ಈಗ ಅಕ್ಕಿ, ಮೆಂತ್ಯೆ ಮತ್ತು ಕುಂಬಳಕಾಯಿ ತಿರುಳನ್ನು ಮೊಸರಿನೊಂದಿಗೆ ಕಡೆಯಿರಿ ರಾತ್ರಿ ಈ ಹಿಟ್ಟನ್ನು ಹಾಗೆಯೇ ನೆನೆಯಲು ಇಡಿ.
* ಈಗ ತವಾವವನ್ನು ತುಸು ಬಿಸಿ ಮಾಡಿಕೊಳ್ಳಿ. ನಂತರ ದೋಸೆಯಾಕಾರಕ್ಕೆ ಹಿಟ್ಟನ್ನು ಸವರಿ.
* ದೋಸೆಯ ಎರಡೂ ಭಾಗವನ್ನು ಬೇಯಿಸಿಕೊಳ್ಳಿ. ಕುಂಬಳ ಕಾಯಿ ತಿರುಳಿನ ದೋಸೆ ಸವಿಯಲು ಸಿದ್ಧವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!