ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಎಲ್ಲರ ಸಹಕಾರ ಪಡೆದು ಕಾರ್ಯ ಎಸಗಿರಿ. ಇಲ್ಲವಾದರೆ ಸಮಸ್ಯೆ ಎದುರಿಸುವಿರಿ. ಕೌಟುಂಬಿಕ ಅಸಹಕಾರದಿಂದ ಬೇಸರ.
ವೃಷಭ
ಕೆಲವರು ನಿಮ್ಮೊಂದಿಗೆ ಅತಿರೇಕದಿಂದ ವರ್ತಿಸಬಹುದು. ಅವರ ಜತೆ ನೀವು ಸಂಯಮದಿಂದಲೇ ವರ್ತಿಸಿ. ಏಟಿಗೆ ಎದುರೇಟು ಬೇಡ.
ಮಿಥುನ
ಸರಳತೆಯೇ ನಿಮ್ಮ ಮೂಲಮಂತ್ರ. ಅದರಿಂದಲೇ ಕಾರ್ಯ ಸಿದ್ಧಿ. ಆಡಂಭರಕ್ಕೆ ಹೋಗದಿರಿ. ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚು ಆಸಕ್ತಿ ವಹಿಸುವಿರಿ. ಕೌಟುಂಬಿಕ ನೆಮ್ಮದಿ.
ಕಟಕ
ದಿನವಹಿ ಕಾರ್ಯದಲ್ಲಿ ವಿಘ್ನಗಳು, ಆದರೂ ಪ್ರಯತ್ನ ನಿಲ್ಲಿಸದಿರಿ. ಅವಶ್ಯ ನೆರವು ನಿಮಗೆ ಒದಗುವುದು. ಕೌಟುಂಬಿಕ ಶಾಂತಿ, ಸಮಾಧಾನ ಸಿಗಲಿದೆ.
ಸಿಂಹ
ಇಂದು ಕಾಲಮಿತಿಯಲ್ಲಿ ಕೆಲಸ ಪೂರೈಸಲಸಾಧ್ಯ, ಹೆಚ್ಚು ಸಮಯ ಬೇಕಾದೀತು. ಭಾವನಾತ್ಮಕ ಸಂಘರ್ಷ. ಸಣ್ಣ ಮಾತೂ ನೋವು ತರಬಹುದು.
ಕನ್ಯಾ
ಆರ್ಥಿಕ ಪರಿಸ್ಥಿತಿ ಸುಧಾರಣೆ. ಧನ ಲಾಭ. ಆದರೆ ಆರೋಗ್ಯ ಸಮಸ್ಯೆ ಕಾಡಬಹುದು. ಹೊಟ್ಟೆಕೆಡಿಸುವ ತಿನಿಸುಗಳಿಂದ ದೂರವಿರಿ.
ತುಲಾ
ವೃತ್ತಿಯಲ್ಲಿ ಉತ್ತಮ ಅವಕಾಶ ನಿಮಗಿಂದು ದೊರಕಲಿದೆ, ಅದನ್ನು ಸದುಪಯೋಗ ಮಾಡಿಕೊಳ್ಳಿ. ಇತರರ ಕೊಂಕು ಮಾತುಗಳಿಗೆ ಕಿವಿಗೊಡದಿರಿ.
ವೃಶ್ಚಿಕ
ವೃತ್ತಿಯಲ್ಲಿ ಉತ್ತಮ ಸಾಧನೆ. ಇತರರಿಂದ ಶ್ಲಾಘನೆ, ಆದರೆ ಕೌಟುಂಬಿಕವಾಗಿ ಅತೃಪ್ತಿಯ ಬೆಳವಣಿಗೆ ಆಗಲಿದೆ. ಮಾನಸಿಕ ದುಗುಡ, ಅಶಾಂತಿ ಇರಲಿದೆ.
ಧನು
ಇಂದು ಸಂತೋಷದ ದಿನ. ಆಪ್ತರೊಂದಿಗೆ ಕಾಲಕ್ಷೇಪ, ಉದ್ಯೋಗದಲ್ಲಿ ಪ್ರಗತಿ, ಕುಟುಂಬ ಮತ್ತು ವೃತ್ತಿ ಮಧ್ಯೆ ಸಮತೋಲನ ಸಾಧಿಸಿದರೆ ಒಳಿತು.
ಮಕರ
ಮುಂಜಾನೆ ಅತ್ಯಧಿಕ ಕೆಲಸ. ಉದ್ವಿಗ್ನತೆ ಎದುರಾಗಲಿದೆ ಆದರೆ ಅಪರಾಹ್ನ ನಿರಾಳತೆ. ಸಂಜೆ ವೇಳೆ ಕುಟುಂಬಸ್ಥರ ಜತೆ, ಆತ್ಮೀಯರ ಜತೆ ಆತ್ಮೀಯ ಕಾಲಕ್ಷೇಪ.
ಕುಂಭ
ಸಮಾಧಾನಚಿತ್ತದಿಂದ ಇಂದು ವ್ಯವಹರಿಸಬೇಕು. ಸಣ್ಣ ಪುಟ್ಟ ವಿಷಯಗಳಿಗೆ ಸಹನೆ ಕಳೆದುಕೊಳ್ಳದಿರಿ. ಅಪರಾಹ್ನದ ನಂತರ ಕೆಲಸ ಸಲೀಸು.
ಮೀನ
ಉದ್ದೇಶ ಸಾಧನೆಗೆ ಭಿನ್ನ ಶೈಲಿಯಲ್ಲಿ ಕಾರ್ಯ ಮಾಡಬೇಕಾಗುವುದು. ಅದರಿಂದಷ್ಟೇ ಸಫಲತೆ ಸಿಗುವುದು. ರಿಸ್ಕ್ ತೆಗೆದುಕೊಳ್ಳಲು ಹಿಂಜರಿಯಬೇಡಿ.