ಟೀಮ್ ಇಂಡಿಯಾ ಗೆಲುವಿಗೆ ಸುಲಭ ಗುರಿ ನೀಡಿದ ವೆಸ್ಟ್ ಇಂಡೀಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.

ನಾಯಕ ರೋವ್‌ಮನ್‌ ಪಾವೆಲ್‌ ಆಕರ್ಷಕ ಆಟದ ನಡುವೆಯೂ ವೆಸ್ಟ್‌ ಇಂಡೀಸ್‌ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 149 ರನ್‌ ಪೇರಿಸಿದೆ.

ಆರಂಭಿಕರಾಗಿ ಕಣಕ್ಕಿಳಿದ ಕೈಲ್ ಮೇಯರ್ಸ್​ (1) ಎಲ್​ಬಿ ಬಲೆಗೆ ಬೀಳಿಸಿದ ಯುಜ್ವೇಂದ್ರ ಚಹಲ್ ಟೀಮ್ ಇಂಡಿಯಾಗೆ ಮೊದಲ ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ಬ್ರೆಂಡನ್ ಕಿಂಗ್ (28) ವಿಕೆಟ್​ ಪಡೆದರು. ಈ ಹಂತದಲ್ಲಿ ಕಣಕ್ಕಿಳಿದ ನಿಕೋಲಸ್ ಪೂರನ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. 2 ಸಿಕ್ಸ್ ಹಾಗೂ 2 ಫೋರ್​ಗಳೊಂದಿಗೆ 41 ರನ್ ಬಾರಿಸಿ ಪೂರನ್ ತಂಡದ ಮೊತ್ತವನ್ನು ಹೆಚ್ಚಿಸಿದರು.
ಇದರ ನಡುವೆ ಹಾರ್ದಿಕ್ ಪಾಂಡ್ಯ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ನಿಕೋಲಸ್ ಪೂರನ್ (41) ತಿಲಕ್ ವರ್ಮಾಗೆ ಕ್ಯಾಚ್ ನೀಡಿದರು.

ಇದಾಗ್ಯೂನಾಯಕ ರೋವ್​ಮನ್ ಪೊವೆಲ್ ಅಬ್ಬರ ಮುಂದುವರೆದಿತ್ತು. 32 ಎಸೆತಗಳನ್ನು ಎದುರಿಸಿ 48 ರನ್​ಗಳಿಸಿ ಔಟಾದರು.
ಅಂತಿಮ ಓವರ್​ನಲ್ಲಿ ಕೇವಲ 9 ರನ್ ನೀಡಿ ಮುಖೇಶ್ ಕುಮಾರ್ ವೆಸ್ಟ್ ಇಂಡೀಸ್ ತಂಡವನ್ನು 20 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್​ಗಳಿಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಟೀಮ್ ಇಂಡಿಯಾ ಪರ 3 ಓವರ್​ಗಳಲ್ಲಿ 24 ರನ್ ನೀಡಿ ಯುಜ್ವೇಂದ್ರ ಚಹಲ್ 2 ವಿಕೆಟ್ ಪಡೆದರೆ, ಅರ್ಷದೀಪ್ ಸಿಂಗ್ 4 ಓವರ್​ಗಳಲ್ಲಿ 31 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇನ್ನು ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲ್ಲಲು 20 ಓವರ್​ಗಳಲ್ಲಿ 150 ರನ್​ ಟಾರ್ಗೆಟ್ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!