ಹೊಸದಿಗಂತ ವರದಿ, ಕೊಪ್ಪಳ:
ಜಿಲ್ಲಾಡಳಿತ ಭವನದಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ವಿಷ ಸೇವಿಸಿ ಒದ್ದಾಡುತ್ತಿದ್ದ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಸ್ಥಳದಲ್ಲಿದ್ದವರು ದಾಖಲಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ ಲಕ್ಷ್ಮಣ ರಾಮಣ್ಣ ಬಂಡಿವಡ್ಡರ (42) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾನೆ. ಆತಹತ್ಯೆಗೆ ಯತ್ನಿಸಿದ ವೇಳೆ ಬರೆದಿರುವ ಡೆತ್ ನೋಟ್ ನಲ್ಲಿ ನಾಲ್ವರು ಹೆಸರು ಬರೆದಿದ್ದಾನೆ.