ಹೊಸದಿಗಂತ ಡಿಜಿಟಲ್ ಡೆಸ್ಕ್:
ವೈಟ್ ಫೀಲ್ಡ್ CEN ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ಬೆನ್ನು ಬಿದ್ದ ಬೆಂಗಳೂರು (Bengaluru) ಪೊಲೀಸ್ ಸಿಕ್ಕ ಚೈನ್ ಲಿಂಕ್ನಲ್ಲಿ ಕೇರಳದ (Kerala) ಆರೋಪಿಗಳ ಬಂಧಿಸಿ ಕರೆತರಲು ತೆರಳಿದ್ದರು. ಅಷ್ಟೊತ್ತಿಗಾಗಲೇ ಪೊಲೀಸರ ವಿರುದ್ಧವೇ ಗಂಭೀರ ಆರೋಪ ಕೇಳಿ ಬಂದು ಅಮಾನತುಗೊಂಡಿದ್ದಾರೆ.
ಸೈಬರ್ ವಂಚನೆ ಆರೋಪಿಯಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಕೇರಳ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಕರ್ನಾಟಕದ ನಾಲ್ವರು ಪೊಲೀಸರನ್ನು ಇಂದು ಅಮಾನತು ಮಾಡಲಾಗಿದೆ.
ಈ ಸಂಬಂಧ ಎಸಿಪಿ ನೀಡಿದ ವರದಿ ಮೇರೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ ಪೊಲೀಸರನ್ನು ಇನ್ಸ್ ಪೆಕ್ಟರ್ ಶಿವಪ್ರಕಾಶ್, ಹೆಡ್ ಕಾನ್ ಸ್ಟೇಬಲ್ ಗಳಾದ ವಿಜಯ್ ಕುಮಾರ್, ಶಿವಣ್ಣ ಮತ್ತು ಕಾನ್ ಸ್ಟೇಬಲ್ ಸಂದೇಶ್ ಎಂದು ಗುರುತಿಸಲಾಗಿದೆ.
ಇವರು ಬೆಂಗಳೂರಿನ ಸೈಬರ್ ಕ್ರೈಮ್, ಆರ್ಥಿಕ ಅಪರಾಧಗಳು ಮತ್ತು ಮಾದಕ ದ್ರವ್ಯ (ಸಿಇಎನ್) ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಬೆಂಗಳೂರಿನ ವೈಟ್ ಫೀಲ್ಡ್ನ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಶಿವಪ್ರಕಾಶ್ ಹಾಗೂ ಮೂವರು ಸಿಬ್ಬಂದಿಗಳ ವಿರುದ್ಧ ಈ ಗಂಭೀರ ಆರೋಪ ಕೇಳಿ ಬಂದಿದೆ. ಉದ್ಯೋಗ ಕೊಡಿಸುವ ನೆಪದಲ್ಲಿ ಆನ್ ಲೈನ್ ಮೂಲಕ 26 ಲಕ್ಷ ವಂಚನೆಯಾದ ಬಗ್ಗೆ ಸಾಫ್ಟ್‌ವೇರ್ ಇಂಜಿನಿಯರ್ ಚಂದಕ್ ಶ್ರೀಕಾಂತ್ ಎಂಬವರು ವೈಟ್ ಫೀಲ್ಡ್ CEN ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿದ ಇನ್ಸ್ಪೆಕ್ಟರ್ ಶಿವಪ್ರಕಾಶ್ ಮತ್ತು ತಂಡ, ಮಡಿಕೇರಿ ಮೂಲದ ಐಸಾಕ್ ವಿಚಾರಣೆ ನಡೆಸಿತ್ತು. ಹಣ ವಂಚನೆ ಬಳಿಕ ವರ್ಗಾವಣೆ ಚೈನ್ ಲಿಂಕ್ ರೀತಿ ಒಬ್ಬರಿಂದಬ್ಬೊರಿಗೆ ಜಾಲ ಹರಡಿದ್ದು, ಪೊಲೀಸರಿಗೆ ಕೇರಳ ಮೂಲದ ನೌಶದ್ ಹೆಸರು ತಿಳಿದುಬಂದಿದೆ. ಹೀಗಾಗಿ ಕಳೆದ ಮೂರು ದಿನಗಳ ಹಿಂದೆ ತೆರಳಿದ್ದ ಪೊಲೀಸರು ನೌಶಾದ್ ಹಿಡಿದು ಆತನ ಮೂಲಕ ಅಕಿಲ್ ಹಾಗೂ ಜೋಸೆಫ್ ನಿಕಲ್ ಮಾಹಿತಿ ಪಡೆದಿದ್ದರು.ಪೊಲೀಸರು ಅಕಿಲ್ ಮತ್ತು ನಿಖಿಲ್ ಅವರನ್ನು ಕರೆತರಲು ಮುಂದಾಗಿದ್ದರು. ಅಷ್ಟೊತ್ತಿಗಾಗಲೇ ಕರ್ನಾಟಕ ಪೊಲೀಸರ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ. ಅಖಿಲ್ಗೆ 3 ಲಕ್ಷ ಹಣ ಬೇಡಿಕೆ ಇಟ್ಟಿದ್ದಾಗಿ ಕೊಚ್ಚಿಯ ಕಲ್ಲಂಚೇರಿ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.
ನಿಖಿಲ್ನಿಂದ 3 ಲಕ್ಷ ಹಣ ಪಡೆದು ಅಖಿಲ್ನನ್ನ ಕಾರಿನಲ್ಲಿ ಕರೆದುಕೊಂಡು ಪೊಲೀಸರು ಬೆಂಗಳೂರು ಕಡೆಗೆ ಹೊರಟಿದ್ದರು. ಈ ವೇಳೆ ಅಖಿಲ್ ಹಣ ನೀಡದೆ, ಕರೆ ಮಾಡಿ ಸ್ನೇಹಿತರಿಂದ ಹಣ ಹೊಂದಿಸುವುದಾಗಿ ಹೇಳಿ ಬೆಂಗಳೂರು ಪೊಲೀಸರಿಂದ ತನ್ನ ಮೊಬೈಲ್ ಪಡೆದು ಆತ್ಮೀಯಳಾದ ವಕೀಲೆ ಸ್ನೇಹಿತೆಗೆ ಕರೆ ಮಾಡಿದ್ದಾನೆ. ಅಲ್ಲದೆ, ಅಪರಿಚಿತ ವ್ಯಕ್ತಿಗಳು ತನ್ನನ್ನು ಕಿಡ್ನಾಪ್ ಮಾಡಿದ್ದು, 3 ಲಕ್ಷ ಹಣಕ್ಕೆ ಕಿಡ್ನಾಪ್ ಮಾಡಿದ್ದಾಗಿ ಮಲಯಾಳಂನಲ್ಲಿ ಹೇಳಿದ್ದಾನೆ.ನಿಖಿಲ್ ಸ್ನೇಹಿತೆ ವಕೀಲೆ ಕಲ್ಲಂಚೇರಿ ಠಾಣೆಯ ಪೊಲೀಸರಿಗೆ ಸ್ನೇಹಿತ ನಿಖಿಲ್ ಅನ್ನು ಅಪರಿಚಿತರು ಕಿಡ್ನಾಪ್ ಮಾಡಿದ್ದು, 3 ಲಕ್ಷಕ್ಕೆ ಬೇಡಿಕೆ ಇಟ್ಟು, ಕರೆದೊಯ್ಯುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ. ಆ ಬಳಿಕ ತ್ರಿಶೂರ್ ಮಾರ್ಗವಾಗಿ ಬರುತ್ತಿದ್ದ ಬೆಂಗಳೂರು ಪೊಲೀಸರು ಕೇಳಿದ್ದ 3 ಲಕ್ಷ ಹಣ ಕೊಡುವುದಾಗಿ ಹೇಳಿ ಕರೆಸಿಕೊಂಡಿದ್ದಾರೆ.
ಅದರಂತೆ ಹಣ ಪಡೆಯುವ ಸಲುವಾಗಿ ಕೊಚ್ಚಿಗೆ ವಾಪಾಸ್ ಬಂದು ನಿಖಿಲ್ ಕಡೆಯವರಿಂದ 3 ಲಕ್ಷ ಹಣ ಪಡೆಯುವಾಗ ಬೆಂಗಳೂರು ಪೊಲೀಸರು ರೆಡ್ ಹ್ಯಾಂಡ್ ಆಗಿ ಹಣದ ಸಮೇತ ಕೇರಳ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಕೂಡಲೇ ಆರೋಪಿಗಳ ವಶಕ್ಕೆ ಪಡೆದ ಕಲ್ಲಂಚೇರಿ ಪೊಲೀಸರು ಸ್ವಿಫ್ಟ್ ಕಾರಿನಲ್ಲಿದ್ದ 3 ಲಕ್ಷ ಹಣವನ್ನು ಜಪ್ತಿಮಾಡಿದ್ದಾರೆ.
ಈ ವೇಳೆ ನಿಖಿಲ್ ತನ್ನನ್ನ ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಬೆಂಗಳೂರು ವೈಟ್ ಫೀಲ್ಡ್ನ ನಾಲ್ವರು ಪೊಲೀಸರ ವಿರುದ್ಧ ಕೇರಳದ ಕಲ್ಲಂಚೇರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೇರಳ ಪೊಲೀಸರು ಎಫ್ಐಆರ್ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.