ನಮ್ಮನೆ ಮುಂದೆ ಯಾಕೆ ಮೂತ್ರ ವಿಸರ್ಜನೆ ಮಾಡ್ತೀರಿ ಎಂದವರ ಮೇಲೆ ಐವರಿಂದ ಹಲ್ಲೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಆರ್‌ಟಿ ನಗರದಲ್ಲಿ ಸಹಿಸಲಸಾಧ್ಯವಾದಂತಹ ಘಟನೆಯೊಂದು ನಡೆದಿದೆ.
ಮನೆಯ ಮುಂದೆ ಪ್ರತಿದಿನವೂ ಮೂತ್ರ ವಿಸರ್ಜನೆ ಮಾಡಿ ಹೋಗುತ್ತಿದ್ದವರಿಗೆ ಮಾಲೀಕರು ನಮ್ಮ ಮನೆಯ ಮುಂದೆ ಈ ರೀತಿ ಮಾಡಬೇಡಿ ಎಂದು ಹೇಳಿದ್ದಕ್ಕೆ, ಐವರು ಮನೆಗೆ ನುಗ್ಗಿ ವ್ಯಕ್ತಿಗೆ ಥಳಿಸಿದ್ದಾರೆ.

೬೫ ವರ್ಷದ ವ್ಯಕ್ತಿ ಮೂರನೇ ಮಹಡಿಯಲ್ಲಿ ನಿಂತುಕೊಂಡು ಐವರು ಯುವಕರು ಮೂತ್ರ ವಿಸರ್ಜನೆ ಮಾಡುವುದನ್ನು ನೋಡಿ ಜೋರು ಮಾಡಿದ್ದಾರೆ. ಅದಕ್ಕೆ ಸಿಟ್ಟಾದ ಐವರು ಮಹಡಿ ಹತ್ತಿ ವ್ಯಕ್ತಿಯನ್ನು ಕೆಳಗಡೆ ಎಳೆದುಕೊಂಡು ಬಂದಿದ್ದಾರೆ.

ನಂತರ ಗಲಾಟೆ ಸದ್ದಿಗೆ ಮಗ, ಮಗಳು ಹಾಗೂ ತಾಯಿಯೂ ಮನೆಯಿಂದ ಹೊರಬಂದಿದ್ದಾರೆ. ಅಪ್ಪನಿಗೆ ಹೊಡೆಯಬೇಡಿ ಎಂದು ಮಗಳು ಕೂಗಿದ್ದಾಳೆ, ನಂತರ ಜಗಳ ಬಿಡಿಸಲು ಮಗ ಜೀವನ್ ಶೆಟ್ಟಿ ಅಡ್ಡ ಬಂದಿದ್ದು, ಜೀವನ್‌ಗೂ ಥಳಿಸಿದ್ದಾರೆ. ಮಹಿಳೆಯರಿಗೂ ಥಳಿಸಿದ್ದಾರೆ.

ಅಕ್ಕಪಕ್ಕದ ಮನೆಯವರು ಹೊರಗೆ ಬಂದಿದ್ದು, ಯಾರೂ ಸಹಾಯ ಮಾಡಿಲ್ಲ. ನಂತರ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬಂದರೂ ಐವರು ಥಳಿಸುವುದನ್ನು ನಿಲ್ಲಿಸದೆ ಹೊಡೆದಿದ್ದಾರೆ. ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ. ಕಾರ್ ಹಾಗೂ ಕಾರ್‌ನಲ್ಲಿದ್ದ ಮದ್ಯವನ್ನೂ ವಶಕ್ಕೆ ಪಡೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!