ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಇದೇ ತಿಂಗಳ 10ರಂದು ತೆರೆಕಾಣುತ್ತಿದೆ.
ರಜನಿ ಅಭಿಮಾನಿಗಳು ಸಿನಿಮಾ ಹೌಸ್‌ಫುಲ್ ಮಾಡೋದಷ್ಟೆ ಅಲ್ಲ ಇನ್ನೂ ಸಾಕಷ್ಟು ರೀತಿಯಲ್ಲಿ ತಮ್ಮ ಪ್ರೀತಿಯನ್ನು ತೋರಿಸ್ತಾರೆ.
ಇಲ್ಲೊಬ್ಬರು ರಜನಿ ಫ್ಯಾನ್ ವಿಭಿನ್ನವಾಗಿ ಅಭಿಮಾನವನ್ನು ಸೆಲೆಬ್ರೇಟ್ ಮಾಡ್ತಿದ್ದು, ತಮ್ಮ ಕಂಪನಿಗೆ ಆಗಸ್ಟ್ 10ರಂದು ರಜೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಎಲ್ಲರಿಗೂ ಜೈಲರ್ ಟಿಕೆಟ್ ಕೂಡ ಕೊಡಿಸೋಕೆ ರೆಡಿಯಾಗಿದ್ದಾರೆ.
ಯುಎನ್‌ಒ ಅಕ್ವಾ ಕೇರ್ ಕಂಪನಿಯ ಬಾಸ್ ಆಗಸ್ಟ್ 10ಕ್ಕೆ ರಜೆ ಘೋಷಣೆ ಮಾಡಿದ್ದಾರೆ. ಬೆಂಗಳೂರು, ಚೆನ್ನೈ ಸೇರಿದಂತೆ ಎಂಟು ಬ್ರಾಂಚ್‌ಗಳಲ್ಲಿ ರಜೆ ಘೋಷಣೆ ಮಾಡಲಾಗಿದೆ. ಜೈಲರ್ ಸಿನಿಮಾ ರಿಲೀಸ್‌ಗೂ ಮುನ್ನವೇ ಕಾವಾಲ ಹಾಡಿನಿಂದ ಸಿಕ್ಕಾಪಟ್ಟೆ ಫೇಮಸ್ ಆಗಿತ್ತು.