ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಣಿಪುರದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಹೆಂಡತಿ-ಮಕ್ಕಳು ನೆಮ್ಮದಿಯಾಗಿ ಮಲಗಲಿ ಎಂದು ಮನೆ ಕಾವಲು ಕಾಯುತ್ತಿದ್ದ ಮೂವರನ್ನು ಗುಂಪೊಂದು ಗುಂಡಿನ ದಾಳಿ ಮಾಡಿ ಕೊಂದಿದೆ.
ಇಂದು ಮುಂಜಾನೆ ಬಿಷ್ಣುಪುರ್ ಜಿಲ್ಲೆಯಲ್ಲಿ ಹಿಂಸಾಚಾರ ನಡೆದಿದ್ದು, ಮೂವರನ್ನು ಕೊಲ್ಲಲಾಗಿದೆ.
ಮಧ್ಯರಾತ್ರಿಯಲ್ಲಿ ಗುಂಪೊಂದು ಏಕಾಏಕಿ ಗುಂಡಿ ದಾಳಿ ಮಾಡಿದೆ, ಬೆಳಗಿನ ಜಾವದ ವರೆಗೂ ಗುಂಡಿನ ದಾಳಿ ಮಾಡಿದ್ದು, ಬೆಳಗ್ಗೆ ತಂದೆ-ಮಗು ಹಾಗೂ ಪಕ್ಕದ ಮನೆಯವರು ಗುಂಡೇಟಿಗೆ ಬಲಿಯಾಗಿದ್ದಾರೆ.
ತಂದೆ-ಮಗ ಹಾಗೂ ನೆರೆಮನೆಯವರು ಮನೆಯಲ್ಲಿ ಹೆಂಡತಿ-ಮಕ್ಕಳು ನೆಮ್ಮದಿಯಾಗಿ ಮಲಗಲಿ ಎಂದು ರಾತ್ರಿ ವೇಳೆ ಮನೆಯನ್ನು ಕಾಯುತ್ತಾ ನಿಂತಿದ್ದರು. ಈ ವೇಳೆ ಗುಂಪೊಂದು ದಾಳಿ ಮಾಡಿದೆ.