ಸೇವಾ ಭಾರತಿ ಟ್ರಸ್ಟ್ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೊಸದಿಗಂತ ವರದಿ ಕಲಬುರಗಿ:

ಸೇವಾ ಭಾರತಿ ಹಾಗೂ ಕೇಶವ ಸೇವಾ ಸಮಿತಿ ಕಲಬುರಗಿ ಮತ್ತು ನ್ಯಾಷನಲ್ ಮೆಡಿಕೋಸ ಆಗ೯ನೈಜೇಷನ್(ಎನ್.ಎಂ.ಒ) ಜೀವನ ಆಧಾರ ಮೆಡಿಕಲ್ ಪೌಂಡೇಶನ್ ಕಲಬುರಗಿ ವತಿಯಿಂದ ಕಲಬುರಗಿ ನಗರದ ವಿವಿಧ 12 ಬಡಾವಣೆಗಳಲ್ಲಿ ಉಚಿತ ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿಯಾಗಿ ನೆರವೇರಿತು.

ಎನ್.ಎಂ.ಒ.ನ ರಾಷ್ಟ್ರೀಯ ಸಹ ಸಂಯೋಜಕರಾದ ಡಾ.ಕುಮಾರ್ ಅಂಗಡಿ,ಜೀವನ ಆಧಾರ ಮೆಡಿಕಲ್ ಫೌಂಡೇಶ್‌ನ ಮಂಜುನಾಥ್ ದೋಶೆಟ್ಟಿ, ಜಗದೀಶ್ ಕಟ್ಟಿಮನಿ ಹಾಗೂ ಡಾ.ಅಶ್ವಿನಿ ಪೂಜಾರಿ ಅವರ ಸಮ್ಮುಖದಲ್ಲಿ ಆರೋಗ್ಯ ತಪಾಸಣೆ ಶಿಬಿರ ಆಯೋಜನೆ ಮಾಡಲಾಗಿತ್ತು.

ನಗರದ ಚೇತನ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ನಗರದ 12 ಕಡೆಗಳಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಸುಮಾರು 3500 ಜನರು ತಪಾಸಣೆಯಲ್ಲಿ ಪಾಲ್ಗೊಂಡಿದ್ದರು.

ಬೆಳಿಗ್ಗೆ 10 ಗಂಟೆಗೆ ಆರಂಭವಾದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬಿಪಿ,ಸಕ್ಕರೆ ಕಾಯಿಲೆ, ಗಂಟಲು, ಕಿವಿ,ಮೂಗು, ದಂತ,ಕಿಡ್ನಿ, ಸಣ್ಣ ಮಕ್ಕಳ, ಗಭಿ೯ಣಿ ಹೆಣ್ಣು ಮಕ್ಕಳು, ಮತ್ತು ಎಲ್ಲಾ ತರಹದ ಸಹಜ ಕಾಯಿಲೆಗಳ ಬಗ್ಗೆ ನುರಿತ ವೈದ್ಯರುಗಳಿಂದ ತಪಾಸಣೆ ಮಾಡಿಸಿಕೊಂಡರು.

ಸುಮಾರು 1 ತಿಂಗಳಿನಿಂದ ತಪಾಸಣೆ ಶಿಬಿರದ ತಯಾರಿಯಲ್ಲಿ ಸುಮಾರು 75 ಸ್ವಯಂಸೇವಕರು ಕಾಯ೯ನಿರತರಾಗಿದ್ದು, ಶಿಬಿರವನ್ನು ಯಶಸ್ವಿಯಾಗಿ ಸಂಪನ್ನಗೊಳಿಲಾಯಿತು.

ಡಾ.ಜ್ಯೋತಿ ಪಾಟೀಲ್, ಡಾ.ಶಾಂತೇಶ, ಡಾ.ಸಿದ್ಧಾಥ೯ ಪಾಟೀಲ್, ಡಾ.ಸ್ಟಾಲಿಯಾ ಅಜುಂ ಹಾಗೂ ಶಾಲೆಯ ಮುಖ್ಯ ಗುರುಗಳಾದ ರವೀಂದ್ರ ಕುಮಾರ್ ಮೇಂಗಜಿ, ಸೇವಾ ಭಾರತಿ ಅಧ್ಯಕ್ಷರಾದ ರಮೇಶ್ ತಿಪನೂರ, ಚಂದ್ರಕಾಂತ ಕಲಕೋರಿ,ನಾಗೇಶ್ ನಾಗಭುಜಂಗೆ,ಸೇವಾ ಭಾರತಿಯ ಶಿಕ್ಷಕಿಯರಾದ ನಿಮ೯ಲಾ,ಸೀಮಾ,ಲಕ್ಷ್ಮೀ ಸೇರಿದಂತೆ ಸುಮಾರು 250 ವೈದ್ಯರು ಹಾಗೂ ನಸ್೯ಗಳ ತಂಡದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!