ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿ ಬೆಂಗಳೂರಿನ ಬಹುದೊಡ್ಡ ಸಮಸ್ಯೆ ಟ್ರಾಫಿಕ್ . ಹೀಗಾಗಿ ಈ ಸಮಸ್ಯೆ ಬಗೆಹರಿಸಲು ಟನಲ್ ನಿರ್ಮಾಣಕ್ಕೆ ನಿರ್ಧಾರ ಮಾಡಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ಬೆಂಗಳೂರು ನಗರದ ಸಿಎಂ ಸಿದ್ಧರಾಮಯ್ಯ ಗೃಹಕಚೇರಿ ಕೃಷ್ಣಾ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಟನಲ್ ನಿರ್ಮಾಣ ಮೂಲಕ ಟ್ರಾಫಿಕ್ ಪ್ರಮಾಣ ಇಳಿಕೆಗೆ ಕ್ರಮ ಕೈಗೊಳ್ಳಲಾಗುವುದು. ಟನಲ್ ನಿರ್ಮಾಣಕ್ಕೆ ಟೆಂಡರ್ ಕರೆಯಲಿದ್ದೇವೆ. ಆಸಕ್ತಿಯಿರುವವರು ಟೆಂಡರ್ನಲ್ಲಿ ಭಾಗಿಯಾಗಬಹುದು ಎಂದು ಹೇಳಿದ್ದಾರೆ.
ಈ ವೇಳೆ ಬಿಬಿಎಂಪಿ ಅಕ್ರಮಗಳ ತನಿಖೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ನಾನು ಎಸ್ಐಟಿ ರಚನೆ ಮಾಡಿಲ್ಲ. ಈಗ ಕೆಲವೊಂದು ಕೆಲಸಗಳು ಬೆಂಗಳೂರಿನಲ್ಲಿ ಆಗಿವೆ. ಯಾವ ಕೆಲಸ, ಯಾವಾಗ ಟೆಂಡರ್ ಆಯ್ತು, ಯಾರು ಟೆಂಡರ್ ಕರೆದಿದ್ದರು ಹೀಗಿ ಸಾಕಷ್ಟು ಗೊಂದಲಗಳಿವೆ.ಕೇವಲ ಮೂರು ದಿನಗಳ ಹಿಂದೆ ಟೆಂಡರ್ ಕರೆದು ಪಾಸ್ ಮಾಡಲಾಗಿದೆ. ಎರಡು ಕೋಟಿ ಕೆಲಸಕ್ಕೆ 1.99 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. 1 ಲಕ್ಷ ರೂ. ಮಾತ್ರ ಪೆಂಡಿಂಗ್ ಇಟ್ಟಿದ್ದಾರೆ. ಈ ತರಹ 25 ಕೇಸ್ ಇದ್ದಾವೆ. ಯಾಕೆ ಹೀಗೆ ಇಡಬೇಕು ಎಂದರು.