ಚಂದಿರನಿಗೆ ಮತ್ತಷ್ಟು ಹತ್ತಿರವಾದ ಚಂದ್ರಯಾನ-3!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಂದ್ರಯಾನ-3 (Chandrayaan 3) ನೌಕೆಯು ಚಂದಿರನಿಗೆ (Moon) ಮತ್ತಷ್ಟು ಹತ್ತಿರವಾಗುತ್ತಿದ್ದು, ಮೂರನೇ ಚಂದಿರನ ಕಕ್ಷೆಗೆ ಇಳಿಸುವ ಪ್ರಕ್ರಿಯೆಯನ್ನು ಇಸ್ರೋ ಪೂರೈಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO), ಚಂದ್ರಯಾನ-3 ನೌಕೆಯ ಕಕ್ಷೆಯನ್ನು 174 km x 1437 ಕಿ.ಮೀ.ಗೆ ಇಳಿಸಲಾಗಿದೆ ಎಂದು ಹೇಳಿದೆ(lunar-bound maneuvering).
ನೌಕೆಯ ಕಕ್ಷೆಯನ್ನು ಇಳಿಸುವ ಮುಂದಿನ ಪ್ರಕ್ರಿಯೆ ಆಗಸ್ಟ್ 14ರಂದು ನಡೆಯಲಿದೆ.

ಈ ಹಿಂದೆ ನಡೆದ ಚಂದ್ರಯಾನ-3 ನೌಕೆಯ ಕಕ್ಷೆ ಇಳಿಸುವ ಪ್ರಕ್ರಿಯೆ ಕೂಡ ಯಶಸ್ವಿಯಾಗಿತ್ತು.

ಚಂದ್ರಯಾನ-3 ನೌಕೆಯಲ್ಲಿರುವ ಮುನ್ನೂಕುವ (ಪ್ರಪಲ್ಷನ್) ವ್ಯವಸ್ಥೆಯನ್ನು ಬಳಸಿಕೊಂಡು ಈ ಕಕ್ಷೆ ಇಳಿಸುವ ಪ್ರಕ್ರಿಯೆಯನ್ನು ನೆರವೇರಿಸಲಾಗುತ್ತದೆ.

ಕಳೆದ ಜುಲೈ ತಿಂಗಳ 14ರಂದು ಇಸ್ರೋ ಚಂದ್ರಯಾನ-3 ಮಿಷನ್‌ಗೆ ಚಾಲನೆ ನೀಡಿತ್ತು. ಚಂದ್ರಯಾನ-3 ನೌಕೆಯನ್ನು ಹೊತ್ತ ಎಲ್‌ವಿಎಂ 3 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿತ್ತು. ನಿರ್ದಿಷ್ಟ ಕಕ್ಷೆಯಲ್ಲಿ ನೌಕೆಯನ್ನು ಇಳಿಸುವಲ್ಲಿ ಯಶಸ್ವಿಯಾಗಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!