ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುನಿರೀಕ್ಷಿತ ‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ (Karnataka Bharat Gaurav Kashi Darshan) ರೈಲು ಯಾತ್ರೆಯಲ್ಲಿ ಬಿಹಾರದ ಗಯಾ ಕ್ಷೇತ್ರ ದರುಶನ ಸೇರ್ಪಡೆಗೊಳಿಸಲಾಗಿದೆ.
ಮೂಲಕ ತೆರಳುವ ಪುಣ್ಯ ಕ್ಷೇತ್ರಗಳಾದ ವಾರಣಾಸಿ, ಅಯೋಧ್ಯೆ ಮತ್ತು ಪ್ರಯಾಗ್-ರಾಜ್ಗಳ ಸಾಲಿಗೆ ಇದೀಗ ಬಿಹಾರದ ಗಯಾ ಕ್ಷೇತ್ರ ಸೇರ್ಪಡೆಯಾಗಿದೆ. ಆ ಮೂಲಕ 8 ದಿನಗಳ ಪ್ರವಾಸವನ್ನು 9 ದಿನಗಳಿಗೆ ಹೆಚ್ಚಿಸಲಾಗಿದೆ.
ಈ ಯೋಜನೆ ಅಡಿಯಲ್ಲಿ ಸದರಿ ಪ್ಯಾಕೇಜ್ಗೆ ಈ ಹಿಂದೆ ಸರ್ಕಾರದಿಂದ ನಿಗದಿ ಮಾಡಲಾಗಿದ್ದ ಸಹಾಯ ಧನ ರೂ.5000/- ಗಳ ಮೊತ್ತವನ್ನು ರೂ.7500 ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಈ ಕುರಿತಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗರೆಡ್ಡಿಯಿಂದ ಪತ್ರಿಕಾ ಪ್ರಕಟಣೆ ಹೊರಡಿಸಿದ್ದಾರೆ.
‘ಕರ್ನಾಟಕ ಭಾರತ್ ಗೌರವ ಕಾಶಿ ದರ್ಶನ’ ಸದರಿ ಪ್ಯಾಕೇಜ್ ಯೋಜನೆಯಲ್ಲಿ ಹೊಸದಾಗಿ ಎಲ್ಹೆಚ್ಬಿ ಕೋಚ್ ಗಳನ್ನು ಅಳವಡಿಸಲಾಗಿದ್ದು, ಇದರಲ್ಲಿ ಸುಸಜ್ಜಿತವಾದ ಅಡುಗೆ ಮನೆ ಹಾಗೂ ಇಬ್ಬರು ವೈದ್ಯರು ಸಹ ಯಾತ್ರಾರ್ಥಿಗಳ ಜೊತೆ ಸೇವಾ ನಿರತರಾಗಿರುತ್ತಾರೆ.
ಮುಂದಿನ ಪ್ರವಾಸ ಆಗಸ್ಟ್ 29 ರಂದು ಹೊರಡಲಿದ್ದು, ಸೆಪ್ಟೆಂಬರ್ 06ರಂದು ವಾಪಸ್ಸ್ ಆಗಮಿಸಲಿದೆ. ಬಳಿಕ ಸೆಪ್ಟೆಂಬರ್ 23ರಂದು ಆರನೇ ಟ್ರಿಪ್ ಹೊರಟು, ಅಕ್ಟೋಬರ್ 02 ರಂದು ವಾಪಸ್ಸ್ ಆಗಲಿದ್ದಾರೆ. ಸದರಿ ಯಾತ್ರೆಗೆ ತುಮಕೂರಿನಲ್ಲಿ ಬೋರ್ಡಿಂಗ್ ಮತ್ತು ಡಿ-ಬೋರ್ಡಿಂಗ್ ವ್ಯವಸ್ಥೆಯನ್ನು ಹೊಸದಾಗಿ ಕಲ್ಪಿಸಲಾಗಿದೆ.