ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಸತ್ ಸದಸ್ಯತ್ವ ಅನರ್ಹತೆ ರದ್ದಾದ ಬಳಿಕ ನಿನ್ನೆ ರಾಹುಲ್ ಗಾಂಧಿ ಮೊದಲ ಭಾಷಣ ಮಾಡಿದ್ದಾರೆ, ಇನ್ನೇನು ಲೋಕಸಭೆಯಿಂದ ನಿರ್ಗಮಿಸಬೇಕು ಎನ್ನುವಾಗ ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಿದ್ದು, ಹೊಸ ವಿವಾದ ಸೃಷ್ಟಿ ಮಾಡಿದೆ.
ಈ ಬಗ್ಗೆ ಶಿವಸೇನೆ ಸಂಸದೆ, ಎಐಸಿಸಿ ಮಾಜಿ ವಕ್ತಾರೆ ಪ್ರಿಯಾಂಕ ಚತುರ್ವೇದಿ ಮಾತನಾಡಿದ್ದು, ರಾಗಾ ಅವರಿಗೆ ಮಾತನಾಡಲು ಯಾರೂ ಬಿಡುತ್ತಿರಲಿಲ್ಲ, ಅವರು ಪ್ರೀತಿಯಿಂದ ಫ್ಲೈಯಿಂಗ್ ಕಿಸ್ ನೀಡಿದ್ದಾರೆ. ಇದು ಪ್ರೀತಿಯ ಸಂಕೇತ, ಇದನ್ಯಾಕೆ ಇಷ್ಟು ದ್ವೇಷ ಮಾಡ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ರಾಗಾ ಲೋಕಸಭೆಯಿಂದ ನಿರ್ಗಮಿಸುವಾಗ ಕೈಯಲ್ಲಿದ್ದ ಕೆಲವು ಫೈಲ್‌ಗಳು ಬಿದ್ದು ಹೋಗಿದೆ. ಈ ವೇಳೆ ರಾಗಾ ಅವುಗಳನ್ನು ತೆಗೆದುಕೊಳ್ಳಲು ಬಗ್ಗಿದ್ದಾರೆ. ಆಗ ಬಿಜೆಪಿ ಸಂಸದರು ರಾಗಾ ನೋಡಿ ನಕ್ಕಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ರಾಗಾ ಫ್ಲೈಯಿಂಗ್ ಕಿಸ್ ನೀಡಿ ಮುನ್ನಡೆದಿದ್ದಾರೆ ಎನ್ನಲಾಗಿದೆ.