ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಲು ಕೆಲವರು ಏನು ಬೇಕಾದರೂ ಮಾಡುತ್ತಾರೆ. ಜನರಿಗೆ ತೊಂದರೆಯಾದರೂ ಸರಿಯೇ ಅವರು ಮಾತ್ರ ಮಾಡುವ ಕೆಲಸ ಮಾಡಿಯೇ ತೀರುತ್ತಾರೆ. ಹೀಗೆ ಟ್ರಾಫಿಕ್ ಸಿಗ್ನಲ್‌ನಲ್ಲಿ ಯುವಕನೊಬ್ಬ ರಸ್ತೆಯಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ದೆಹಲಿಯ ಲಕ್ಷ್ಮಿನಗರ ಮೆಟ್ರೋ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ರೋಹಿತ್ ಕುಮಾರ್ ಎಂಬ ಯುವಕ ಬ್ಯುಸಿ ಸಿಗ್ನಲ್ ನಲ್ಲಿ ಕೆಂಪು ದೀಪ ಬಿದ್ದಾಗ ಬಕೆಟ್‌ನಲ್ಲಿ ನೀರು ತಂದು ರಸ್ತೆಯಲ್ಲಿ ಸ್ನಾನ ಮಾಡತೊಡಗಿದ. ಆತನ ಈ ಕೃತ್ಯವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರ ಗಮನಕ್ಕೂ ಬಂದಿದೆ.
ಕೂಡಲೇ ಯುವಕನನ್ನು ಕರೆಸಿ, ಬೆಂಡೆತ್ತಿ ಮುಂದೆ ಇಂತಹ ಕೆಲಸ ಮಾಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಏನೇ ಆಗಲಿ ಯುವಕರು ಇಂತಹ ಸಾಹಸಗಳನ್ನು ಮಾಡದಂತೆ ಪೊಲೀಸರು ಕ್ರಮ ಕೈಗೊಳ್ಳಬೇಕೆಂಬುದು ನೆಟ್ಟಿಗರ ಆಗ್ರಹವಾಗಿದೆ.