ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೋಮ್ ವರ್ಕ್ ಮಾಡದ ಮಕ್ಕಳಿಗೆ ಶಿಕ್ಷಕರು ಏನು ಶಿಕ್ಷೆ ಕೊಡುತ್ತಾರೆ? ಹೆಚ್ಚೆಂದರೆ ಎರಡು ಪೆಟ್ಟು ಕೊಟ್ಟು ಅಲ್ಲೇ ಕೂರಿಸಿ ಹೋಂ ವರ್ಕ್ ಬರೆಸಬಹುದಷ್ಟೆ.
ಆದರೆ ಉತ್ತರ ಪ್ರದೇಶದ ಆಜಂಗಢ ಜಿಲ್ಲೆಯ ಮಿರ್ಜಾಪುರದ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ಹೋಂ ವರ್ಕ್ ಮಾಡಿಲ್ಲ ಎಂದು ಪ್ರಾಂಶುಪಾಲರು 50 ಏಟು ಕೊಟ್ಟಿದ್ದಾರೆ. ಸಾಲದ್ದಕ್ಕೆ ಕಿವಿ ಹಿಡಿದುಕೊಂಡು 200 ಬಸ್ಕಿ ಹೊಡೆಸಿದ್ದಾರೆ.
ಹೆಚ್ಚು ಹೆದರಿದ ಮಗುವಿಗೆ ಜ್ವರ ಬಂದಿದ್ದು, ಭಯದಿಂದ ಶಾಲೆಗೆ ಹೋಗುವುದಿಲ್ಲ ಎಂದು ಮನೆಯಲ್ಲಿಯೇ ಕುಳಿತಿದ್ದಾಳೆ. ಐದನೇ ಕ್ಲಾಸ್ ಮಕ್ಕಳಿಗೆ ಹೆಚ್ಚು ಹೋಂ ವರ್ಕ್ ನೀಡುವುದು, ಬರೆಯದೇ ಬಂದರೆ ಪೋಷಕರಿಗೆ ಹೇಳಬೇಕಿತ್ತು. ಆದರೆ ಇಷ್ಟೊಂದು ಹೊಡೆದಿದ್ದು ಯಾಕೆ? ಎಂದು ಪೋಷಕರು ದೂರಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಪ್ರಾಂಶುಪಾಲರ ವಿರುದ್ಧ ಕ್ರಮಕೈಗೊಳ್ಳುವಂತೆ ಪೋಷಕರು ಮನವಿ ಸಲ್ಲಿಸಿದ್ದಾರೆ.