ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ತಮಿಳಿನ ಸ್ಟಾರ್ ಹೀರೋ ‘ವಿಶಾಲ್’ ಮದುವೆ ಬಗ್ಗೆ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ವಿಶಾಲ್ ತಮಿಳಿನ ಜನಪ್ರಿಯ ನಾಯಕಿ ಲಕ್ಷ್ಮಿ ಮೆನನ್ ಅವರನ್ನು ಪ್ರೀತಿಸುತ್ತಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯಿಸಿದ ವಿಶಾಲ್ ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ ಎಂದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬರುತ್ತಿರುವ ಮದುವೆಯ ಸುದ್ದಿಯನ್ನು ಸಂಪೂರ್ಣವಾಗಿ ಖಂಡಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
“ಸಾಮಾನ್ಯವಾಗಿ ನಾನು ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗಳಿಗೆ ಪ್ರತಿಕ್ರಿಯಿಸುವುದಿಲ್ಲ. ಇದು ಅನಗತ್ಯ ಎಂದು ನಾನು ಭಾವಿಸುತ್ತೇನೆ. ಆದರೆ ಲಕ್ಷ್ಮಿ ಮೆನನ್ ಜೊತೆಗಿನ ನನ್ನ ಮದುವೆಯ ವದಂತಿಗಳ ಬಗ್ಗೆ ಮಾತನಾಡಲೇಬೇಕಿದೆ. ಲಕ್ಷ್ಮಿ ಮೆನನ್ ನಟಿ ಎನ್ನುವುದಕ್ಕಿಂತ ಮೊದಲು ಒಬ್ಬ ಹೆಣ್ಣುಮಗಳು. ಹೆಣ್ಮಕ್ಕಳ ವೈಯಕ್ತಿಕ ಜೀವನದ ಬಗ್ಗೆ ಹೀಗೆ ಸುಳ್ಳು ಹೇಳುತ್ತಾ ಆಕೆಯ ಖಾಸಗಿತನವನ್ನು ನಾಶ ಮಾಡುತ್ತಿದ್ದೀರಿ. ಆಕೆಯ ಇಮೇಜ್ ಹಾಳಾಗುವಂತೆ ಮಾಡುತ್ತಿದ್ದೀರಿ. ನಾನು ಯಾರನ್ನು ಮದುವೆಯಾಗುತ್ತೇನೆ ಎಂಬುದನ್ನು ವರ್ಷ, ದಿನಾಂಕ, ಸಮಯದ ಸಮೇತ ನಿಮಗೆ ತಿಳಿಸುತ್ತೇನೆ. ಅಲ್ಲಿವರೆಗೂ ಇಂತಹ ಸುದ್ದಿ ಹರಡುವುದನ್ನು ನಿಲ್ಲಿಸಿ” ಎಂದು ಕೆಂಡವಾದರು
ಸದ್ಯ ವಿಶಾಲ್ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಶಾಲ್ ಮತ್ತು ಲಕ್ಷ್ಮಿ ಮೆನನ್ ಪಾಂಡಿಯನಾಡು ಮತ್ತು ಇಂದ್ರಡು ಚಿತ್ರಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಈ ಎರಡು ಚಿತ್ರಗಳಲ್ಲಿ ವಿಶಾಲ್ ಅವರ ಕೆಮಿಸ್ಟ್ರಿ ಚೆನ್ನಾಗಿತ್ತು. ಆಮೇಲೆ ಇಬ್ಬರೂ ಯಾವುದೇ ಸಿನಿಮಾದಲ್ಲಿ ನಟಿಸಿರಲಿಲ್ಲ. ವಿಶಾಲ್ ಸದ್ಯ ಮಾರ್ಕ್ ಆಂಟನಿ ಚಿತ್ರದಲ್ಲಿ ನಟಿಸುತ್ತಿದ್ದಾರೆ.