ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಟೈಗರ್ ಶ್ರಾಫ್ ಹಾಗೂ ದಿಶಾ ಪಠಾನಿ ರಿಲೇಶನ್‌ಶಿಪ್ ವಿಷಯ ಜಗಜ್ಜಾಹೀರಾಗಿದೆ. ಆದರೆ ಇವರಿಬ್ಬರ ಮಧ್ಯೆ ಬ್ರೇಕಪ್ ಆಗಿದೆ ಎನ್ನುವ ವಿಷಯ ಇತ್ತೀಚೆಗೆ ವೈರಲ್ ಆಗಿತ್ತು.
ಇದಕ್ಕೆ ಪುಷ್ಠಿ ನೀಡುವಂತೆ ದಿಶಾ ತಮ್ಮ ಹೊಸ ಬಾಯ್‌ಫ್ರೆಂಡ್ ಜೊತೆಗಿನ ಫೋಟೊವನ್ನು ಪೋಸ್ಟ್ ಮಾಡಿದ್ದರು. ಆದರೆ ಟೈಗರ್ ಮಾತ್ರ ಏನೂ ಹೇಳಿರಲಿಲ್ಲ. ಇದೀಗ ಬ್ರೇಕಪ್ ಬಗ್ಗೆ ಟೈಗರ್ ಮಾತನಾಡಿದ್ದು, ನಾನು ಸಿಂಗಲ್ ಎಂದು ಹೇಳಿಕೊಂಡಿದ್ದಾರೆ.
ಕಮಿಟೆಡ್ ಜೀವನ ನನಗೆ ಇಷ್ಟ ಇಲ್ಲ, ಇದೀಗ ನಾನು ಸಿಂಗಲ್ ಆಗಿದ್ದೇನೆ ಎಂದಿದ್ದಾರೆ. ದಿಶಾಗೆ ಕಮಿಟೆಡ್ ಜೀವನ ಬೇಕಿತ್ತು, ಅವರು ಮದುವೆ ಪ್ರಸ್ತಾಪ ಮಾಡಿದಾಗ ಟೈಗರ್ ನೋ ಎಂದಿದ್ದರು. ಹಾಗಾಗಿ ಇವರ ನಡುವೆ ಬ್ರೇಕಪ್ ಆಗಿದೆ ಎಂದು ಹೇಳಲಾಗಿತ್ತು.