FOOD| ಈ ತರಕಾರಿ ರುಚಿ ಸಿಹಿ, ಅದಕ್ಕಾಗಿ ʼನೋʼ ಅನ್ನೋರು ತಿಂದು ನೋಡಿ ಬೀಟ್‌ರೂಟ್‌ ಉಪ್ಪಿನಕಾಯಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೀಟ್‌ರೂಟ್‌ ತರಕಾರಿ ರುಚಿ ಸಿಹಿಯಾಗಿರುತ್ತೆ ಹಾಗಾಗಿ ಅದನ್ನು ತಿನ್ನೊಲ್ಲ ಎನ್ನುವವರು ಒಮ್ಮೆ ಮಾಡಿ ತಿಂದು ನೋಡಿ ಬೀಟ್‌ರೂಟ್‌ ಉಪ್ಪಿನಕಾಯಿ.

ಬೇಕಾಗುವ ಸಾಮಾಗ್ರಿಗಳು:

* ಬೀಟ್ ರೂಟ್
* ಬೆಳ್ಳುಳ್ಳಿ
* ಹಸಿ ಮೆಣಸಿನ ಕಾಯಿ
* ವಿನಿಗರ್
* ಉಪ್ಪು
* ಮೆಂತೆ
* ಇಂಗು
* ಸಾಸಿವೆ
* ಎಣ್ಣೆ

ಮಾಡುವ ವಿಧಾನ:

* ಮೊದಲು ಬೀಟ್ ರೂಟ್ ಅನ್ನು ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು.
* ಈಗ ಬೆಳ್ಳುಳ್ಳಿ ಎಸಳು ಮತ್ತು ಹಸಿಮೆಣಸಿನಕಾಯಿಯನ್ನು ಚಿಕ್ಕದಾಗಿ ಕತ್ತರಿಸಿ ಈ ಬೀಟ್ ರೂಟ್ ಜೊತೆಗೆ ಮಿಕ್ಸ್‌ ಮಾಡಿ. ನಂತರ ವಿನಿಗರ್ ಮತ್ತು ಸ್ವಲ್ಪ ಉಪ್ಪು ಹಾಕಿ.
* ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು, ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ ಮತ್ತು ಮೆಂತೆ ಬೀಜ, ಇಂಗು ಹಾಕಿ ಹಾಕಿ ಒಗ್ಗರಣ್ಣೆ ಮಾಡಿಕೊಳ್ಳಿ.
* ಒಗ್ಗರೆಣ್ಣೆಯನ್ನು ಬೀಟ್ ರೂಟ್ ಮಿಶ್ರಣಕ್ಕೆ ಹಾಕಿದರೆ ರುಚಿಕರವಾದ ಬೀಟ್ ರೂಟ್ ಉಪ್ಪಿನಕಾಯಿ ರೆಡಿ. ಇದನ್ನು ಜಾರ್ ಅಥವಾ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಿಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!