ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಮಿಗಳಿಗೆ ನೂರಾರು ಕೋಟಿ ರೂಪಾಯಿ ವಂಚನೆ ಮಾಡಿ ಜೈಲು ಪಾಲಾಗಿರುವ ಸುಖೇಶ್ ಚಂದ್ರಶೇಖರ್ ಜೈಲಿನಲ್ಲೇ ಇದ್ದುಕೊಂಡು ನಟಿ ಜಾಕ್ವೆಲಿನ್‌ಗೆ ಲವ್ ಲೆಟರ್ ಬರೆದಿದ್ದಾರೆ.
ಇಂದು ಜಾಕ್ವೆಲಿನ್ ಫರ್ನಾಂಡಿಸ್ ಹುಟ್ಟುಹಬ್ಬ, ಇದಕ್ಕಾಗಿ ಕೈಯಲ್ಲೇ ಪತ್ರವೊಂದನ್ನು ಬರೆದಿದ್ದು, ಜೈಲಿನಿಂದ ಬೇಗ ಬರ್ತೀನಿ ಬೇಬಿ ಎಂದು ಪತ್ರ ಬರೆದು ಕಳಿಸಿದ್ದಾರೆ.
ಜೈಲಿನಿಂದ ಬಂದ ಮೇಲೆ ನಿನ್ನ ಜೊತೆಯೇ ಇರ‍್ತೇನೆ, ತುಂಬಾ ಮಿಸ್ ಮಾಡ್ಕೊತಿದ್ದೇನೆ, ಮುಂದಿನ ವರ್ಷ ಒಟ್ಟಿಗೇ ಬರ್ಥಡೇ ಆಚರಿಸೋಣ, ನಿನಗಾಗಿ ನಾನಿದ್ದೇನೆ, ನನ್ನ ಜೀವನವೇ ನೀನು, ಯಾವುದಕ್ಕೂ ಹೆದರದೆ ಈ ದಿನವನ್ನು ಎಂಜಾಯ್ ಮಾಡು, ನನ್ನ ಪಾಲಿನ ಒಂದು ಪೀಸ್ ಕೇಕ್ ಕೂಡ ನೀನೇ ತಿನ್ನು. ನನ್ನ ನಿನ್ನ ಪ್ರೀತಿ ವ್ಯಕ್ತಪಡಿಸುವ ಚಿತ್ರಗಳಲನ್ನೂ ಬರೆದಿದ್ದೇನೆ ಎಂದು ಪತ್ರದಲ್ಲಿ ಸುಖೇಶ್ ಬರೆದಿದ್ದಾರೆ.