ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಸಿನಿಮಾ ಫೀಲ್ಡ್ಗೆ ಎಂಟ್ರಿ ಕೊಟ್ಟಿದ್ದು ಕಿರಿಕ್ ಪಾರ್ಟಿ ಮೂಲಕ. ಕಿರಿಟ್ ಪಾರ್ಟಿ ರಿಲೀಸ್ ಆದ ನಂತರ ರಶ್ಮಿಕಾ ಖ್ಯಾತಿ ಎಲ್ಲೆಡೆ ಹಬ್ಬಿತ್ತು. ಇದರಿಂದಾಗಿಯೇ ರಶ್ಮಿಕಾಗೆ ಬೇರೆ ಸಿನಿಮಾಗಳ ಆಫರ್ ಸಿಕ್ಕಿತ್ತು. ಕಿರಿಕ್ ಪಾರ್ಟಿ ರಿಲೀಸ್ ಆಗಿದ್ದು, ಡಿಸೆಂಬರ್ನಲ್ಲಿ.
ಹೌದು, ಕಿರಿಕ್ ಪಾರ್ಟಿ ನಂತರ ರಶ್ಮಿಕಾಗೆ ಇನ್ನಷ್ಟು ಖ್ಯಾತಿ ತಂದುಕೊಟ್ಟು ಬಾಲಿವುಡ್ ಸಿನಿಮಾ ಆಫರ್ ಬರುವಂತೆ ಮಾಡಿದ್ದು, ಪುಷ್ಪಾ ಸಿನಿಮಾ ಹೌದು, ಪುಷ್ಪಾ ಕೂಡ ರಿಲೀಸ್ ಆಗಿದ್ದು, ಡಿಸೆಂಬರ್ನಲ್ಲಿ.
ಇದೀಗ ರಶ್ಮಿಕಾ ಅಭಿನಯದ ಮತ್ತೊಂದು ಬಾಲಿವುಡ್ ಸಿನಿಮಾ ಅನಿಮಲ್ ಡಿಸೆಂಬರ್ನಲ್ಲಿ ರಿಲೀಸ್ ಆಗ್ತಿದೆ. ಬಾಲಿವುಡ್ನಲ್ಲಿ ರಶ್ಮಿಕಾಗೆ ಇದು ಬಹುಮುಖ್ಯ ಸಿನಿಮಾ ಆಗಿದ್ದು, ಸಿನಿಮಾ ಗೆಲ್ಲುವ ನಿರೀಕ್ಷೆಯಲ್ಲಿ ರಶ್ಮಿಕಾ ಇದ್ದಾರೆ. ಡಿಸೆಂಬರ್ ತಿಂಗಳು ನನಗೆ ಸದಾ ಲಕ್ಕಿ, ಅನಿಮಲ್ ಕೂಡ ದೊಡ್ಡ ಹಿಟ್ ಆಗಲಿ ಎಂದು ರಶ್ಮಿಕಾ ಹೇಳಿದ್ದಾರೆ.