Friday, September 29, 2023

Latest Posts

LIFESTYLE| ಉತ್ತರ ದಿಕ್ಕಿಗೆ ಮಲಗಿದರೆ ಇಷ್ಟೆಲ್ಲಾ ಸಮಸ್ಯೆಗಳು ಬರುತ್ತವಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ..ನಿದ್ರೆಯು ಅಷ್ಟೇ ಮುಖ್ಯ. ನೀವು ಒಂದು ದಿನ ನಿದ್ರೆ ಮಾಡದಿದ್ದರೆ, ಮರುದಿನ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ನಿದ್ರೆ ಕಳೆದುಹೋದ ಶಕ್ತಿಯನ್ನು ಮರಳಿ ಪಡೆಯಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ಎಷ್ಟೇ ಪ್ರಯತ್ನಿಸಿದರೂ ನಿದ್ರೆ ಬರುತ್ತಿಲ್ಲ ಎಂದರೆ, ಅನಾರೋಗ್ಯ, ಖಿನ್ನತೆಯಂತಹ ಕಾರಣಗಳು ಇರಬಹುದು. ಕೆಲವೊಮ್ಮೆ ಮಲಗುವ ದಿಕ್ಕು ಸಹ ನಿದ್ರಾಹೀನತೆಗೆ ಕಾರಣವಾಗಬಹುದು.

ಉತ್ತರ ದಿಕ್ಕಿಗೆ ತಲೆ ಇಟ್ಟು ಮಲಗಬೇಡಿ ಎಂಬುದಕ್ಕೆ ವೈಜ್ಞಾನಿಕ ಕಾರಣಗಳೂ ಇವೆ. ಭೂಮಿಯ ಕಾಂತೀಯ ಕ್ಷೇತ್ರಗಳು ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಕೇಂದ್ರೀಕೃತವಾಗಿವೆ. ನಿಮ್ಮ ತಲೆಯು ಉತ್ತರಕ್ಕೆ ಮುಖ ಮಾಡಿ ಮಲಗಿದಾಗ, ನಿಮ್ಮ ದೇಹದ ಕಾಂತಕ್ಷೇತ್ರವು ಭೂಮಿಯ ಮೇಲೆ ಅಡ್ಡಿಪಡಿಸುತ್ತದೆ. ಇದು ನಿಮ್ಮ ರಕ್ತದೊತ್ತಡದಲ್ಲಿ ಏರುಪೇರಾಗುವಂತೆ ಮಾಡುತ್ತದೆ. ಇದಲ್ಲದೆ, ಅನೇಕ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ಉದ್ಭವಿಸುತ್ತವೆ. ವಿಶೇಷವಾಗಿ ಮೆದುಳಿನ ನರಗಳಿಗೆ ಹಾನಿಯಾಗುವ ಸಂಭವವಿದೆ.

ಉತ್ತರ ದಿಕ್ಕಿಗೆ ಮಲಗಿದಾಗ ಅಯಸ್ಕಾಂತವು ಕಬ್ಬಿಣವನ್ನು ಆಕರ್ಷಿಸುತ್ತದೆ. ಇದು ಮೆದುಳಿನಲ್ಲಿ ಸಂಗ್ರಹವಾಗುತ್ತದೆ. ಕೆಲವರಿಗೆ ಎಚ್ಚರವಾದಾಗ ತಲೆನೋವು ಬರುವುದು ಕೂಡ ಇದಕ್ಕೆ. ಪೂರ್ವ ಮತ್ತು ದಕ್ಷಿಣವು ಮಲಗಲು ಉತ್ತಮ ದಿಕ್ಕುಗಳು. ನೀವು ನಿಮ್ಮ ತಲೆಯನ್ನು ದಕ್ಷಿಣಕ್ಕೆ ಮುಖ ಮಾಡಿ ಮಲಗಿದರೆ, ಅದು ಉತ್ತರ ದಿಕ್ಕಿನ ಋಣಾತ್ಮಕ ಪರಿಣಾಮಗಳನ್ನು ಹಿಮ್ಮೆಟ್ಟಿಸುತ್ತದೆ. ಎಡಬದಿಯಲ್ಲಿ ಮಲಗಿದರೆ ಉತ್ತಮ ನಿದ್ದೆ ಬರುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!