ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಘಟನೆ ನಡೆದ ವೇಳೆ ಕಚೇರಿಯಿಂದ ಪರಾರಿಯಾಗಿದ್ದ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಬೆಂಕಿ ಹೊತ್ತಿಕೊಂಡಾಗ ಇಬ್ಬರು ಸಿಬ್ಬಂದಿ ಅಲ್ಲೇ ಇದ್ದರು. ಸ್ಥಳದಲ್ಲೇ ಲಭ್ಯವಿದ್ದ ಫೈರ್ ಎಕ್ಸ್ಟಿಂಗ್ಯುಷರ್ ನೆರವಿನಿಂದ ಬೆಂಕಿ ನಂದಿಸದೇ ಓಡಿ ಹೋಗಿದ್ದಾರೆ. ಪ್ರಾಯಶಃ ಅವರು ಬೆಂಕಿ ನಂದಿಸಿದ್ದರೆ ಈ ಮಟ್ಟಿಗಿನ ಅನಾಹುತು ತಪ್ಪುತ್ತಿತ್ತು ಎನ್ನಲಾಗಿದೆ.
ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಮಾಹಿತಿ ನೀಡಿದ್ದು, ಈ ಬಗ್ಗೆ ಮೂರು ಆಯಾಮಗಳಲ್ಲಿ ತನಿಖೆ ನಡೆಸಲಾಗುವುದು, ಒಂದು ಇಲಾಖಾ ತನಿಖೆ, ಎರಡನೇಯದ್ದು ಪೊಲೀಸ್ ತನಿಖೆ ಹಾಗೂ ಮೂರನೇಯದ್ದು ಎಲೆಕ್ಟ್ರಿಕಲ್ ಇನ್ಸ್ಪೆಕ್ಟೋರೇಟ್ ಎಂಬ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ ಎಂದಿದ್ದಾರೆ.