ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ರಾಜಧಾನಿಯ ಪ್ರಸಿದ್ಧ ಹೊಟೇಲ್ ನಮ್ಮೂರ ತಿಂಡಿಯಲ್ಲಿ ಸ್ಟೀಮರ್ ಬ್ಲಾಸ್ಟ್ ಆಗಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ನಾಗರಬಾವಿಯಲ್ಲಿ ಇರುವ ನಮ್ಮೂರ ತಿಂಡಿ ಹೊಟೇಲ್‌ನಲ್ಲಿ ಇಡ್ಲಿ ತಯಾರಿಸಲು ನೀರು ಬಿಸಿ ಮಾಡಲು ಸ್ಟೀಮರ್ ಆನ್ ಮಾಡಲಾಗಿತ್ತು. ಪ್ರೆಶರ್ ಹೆಚ್ಚಾಗಿ ಬ್ಲಾಸ್ಟ್ ಆಗಿದ್ದು, ಹೊಟೇಲ್‌ನ ಇಡೀ ಕಿಚನ್ ಛಿದ್ರವಾಗಿದೆ. ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸುರಕ್ಷತಾ ಕ್ರಮಕೈಗೊಳ್ಳಬೇಕು ಎಂದು ಜ್ಞಾನಭಾರತಿ ಠಾಣೆಯ ಪೊಲೀಸರು ಹೇಳಿದ್ದಾರೆ.