ಹೊಸದಿಗಂತ ವರದಿ ಅಂಕೋಲಾ:
ಕೃಷಿ ಕ್ಷೇತ್ರದಿಂದ ವಿಮುಖರಾಗುತ್ತಿರುವ ಕೃಷಿಕರಿಗೆ ಉತ್ತೇಜನ ನೀಡುವ ದಿಶೆಯಲ್ಲಿ ಪಹರೆ ವೇದಿಕೆ ಉತ್ತರ ಕನ್ನಡ ಮತ್ತು ಬೆಳೆಗಾರರ ಸಮಿತಿ ಅಂಕೋಲಾ, ಇವರ ಆಶ್ರಯದಲ್ಲಿ ನ್ಯಾಯವಾದಿ ನಾಗರಾಜ ನಾಯಕ ಅವರ ಪರಿಕಲ್ಪನೆಯ 11 ನೇ ವರ್ಷದ ಕೃಷಿ ಹಬ್ಬ ಕಾರ್ಯಕ್ರಮ ಬಾಸಗೋಡದ ಸರಯೂ ಬನದಲ್ಲಿ ನಡೆಯಿತು.
ನಿರೂಪಕ ಅಜೀತ್ ಹನುಮಕ್ಕನವರ್ ಕೃಷಿ ಭೂಮಿಯಲ್ಲಿ ಉಳುಮೆ ಮಾಡಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ ಬರಿಗಾಲ ಸಂತ ಖ್ಯಾತಿಯ ಬೈಂದೂರು ಕ್ಷೇತ್ರದ ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಅಧ್ಯಕ್ಷತೆ ವಹಿಸಿದ್ದರು.
ಶೆಟಗೇರಿ ಗ್ರಾಮ ಪಂಚಾಯತ್ ಅಧ್ಯಕ್ಷ ಲಕ್ಷ್ಮೀಧರ ನಾಯಕ, ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ಭಾಸ್ಕರ ನಾರ್ವೇಕರ್, ದೇವರಾಯ ನಾಯಕ, ಕೃಷಿ ಭೂಮಿ ಒಡೆದು ವೆಂಕಣ್ಣ ನಾಯಕ, ಬೆಳೆಗಾರರ ಸಮಿತಿ ಅಧ್ಯಕ್ಷ ಕಾರ್ಯಕ್ರಮದ ರೂವಾರಿ ನಾಗರಾಜ ನಾಯಕ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಕೃಷಿ ಕ್ಷೇತ್ರದ ಸೇವೆಗೆ ಬಾಸಗೋಡದ ರೈತ ಸೇವಾ ಸಹಕಾರಿ ಸಂಘಕ್ಕೆ ಕೃಷಿ ಭೀಮ ಪ್ರಶಸ್ತಿ ನೀಡಿ ಗೌರವಿಸಲಾಯಿತು ಮತ್ತು ಕೃಷಿ ಕ್ಷೇತ್ರದ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.