ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ರಿಯಲ್ ಸ್ಟಾರ್ ಉಪೇಂದ್ರ ಅವರು ನೀಡಿದ ಹೇಳಿಕೆ ವಿರುದ್ಧ ರಾಜ್ಯದೆಲ್ಲೆಡೆ ಆಕ್ರೋಶ ಹೆಚ್ಚುತ್ತಿದ್ದು, ಉಪೇಂದ್ರ ಅವರನ್ನು ಕನ್ನಡ ಚಿತರರಂಗದಿಂದ 5 ವರ್ಷಗಳ ಕಾಲ ನಿಷೇಧ ಮಾಡಬೇಕು ಎಂದು ಕರ್ನಾಟಕ ಚಲನಚಿತ್ರ ಮಂಡಳಿಗೆ ಪತ್ರವನ್ನು ಬರೆದಿದ್ದಾರೆ.
ಸಾಮಾಜಿಕ ಕಾರ್ಯಕರ್ತ ನವೀನ್ ಎನ್ನುವವರಿಂದ ಕರ್ನಾಟಕ ಚಲನಚಿತ್ರಮಂಡಳಿಗೆ ಮನವಿ ಸಲ್ಲಿಸಲಾಗಿದೆ. ಚಿತ್ರರಂಗದಿಂದ 5 ವರ್ಷ ಬ್ಯಾನ್ ಮಾಡಲು ಪತ್ರದಲ್ಲಿ ಮನವಿ ಮಾಡಿ ಉಲ್ಲೇಖ ಮಾಡಿದ್ದಾರೆ.
ಉಪೇಂದ್ರ ಅವರು ಗಲಭೆ, ಅಶಾಂತಿ ಸೃಷ್ಟಿಸಲು ಹೊರಟಿದ್ದಾರೆ. ಅವರು ಜಾತಿ ಜಾತಿಗಳನ್ನ ಎತ್ತಿಕಟ್ಟೊ ಕೆಲಸ ಮಾಡಿದ್ದಾರೆ. ಈ ಪ್ರಕರಣವನ್ನು ಫಿಲ್ಮ್ ಚೇಂಬರ್ ಗಂಭೀರವಾಗಿ ಪರಿಗಣಿಸಬೇಕು. ನಾಡಿನ ಗೌರವವನ್ನು ಎತ್ತಿಹಿಡಿದು ಶೋಷಿತರ ಪರ ನಿಲ್ಲಬೇಕು. ಆದ್ದರಿಂದ ಉಪೇಂದ್ರ ಅವರನ್ನು ಈ ಕೂಡಲೆ ಕನಿಷ್ಠ 5 ವರ್ಷ ಚಿತ್ರರಂಗದಿಂದ ನಿಷೇಧ ಹೇರಬೇಕು ಎಂದು ಮನವಿ ಸಲ್ಲಿಸಲಿದ್ದಾರೆ.