ಹೊಸದಿಗಂತ ವರದಿ, ಮಡಿಕೇರಿ:
ಬೈಕ್ ಮತ್ತು ಮಾರುತಿ ಓಮ್ನಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಸಾವಿಗೀಡಾದ ಘಟನೆ ಗೋಣಿಕೊಪ್ಪದ ಕೈಕೇರಿಯಲ್ಲಿ ನಡೆದಿದೆ.
ಗೋಣಿಕೊಪ್ಪ ಎಂ.ಎಂ.ಲೇಔಟ್ ನಿವಾಸಿ ಅಮೀಶ್ (23) ಮೇತ ಯುವಕ.
ಸೋಮವಾರ ಮಧ್ಯಾಹ್ನ ವೀರಾಜಪೇಟೆಯಿಂದ ಗೋಣಿಕೊಪ್ಪದತ್ತ ತೆರಳುತ್ತಿದ್ದ ಬೈಕ್ ಹಾಗೂ ಗೋಣಿಕೊಪ್ಪದಿಂದ ವೀರಾಜಪೇಟೆಗೆ ತೆರಳುತ್ತಿದ್ದ ಓಮ್ನಿ ನಡುವೆ ಕೈಕೇರಿ ಬಳಿ ಮುಖಾಮುಖಿ ಡಿಕ್ಕಿ ಸಂಭವಿರುವುದಾಗಿ ಹೇಳಲಾಗಿದೆ.
ಗೊಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.