ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಆಶೋತ್ತರಗಳು ಈಡೇರುವ ಸಫಲ ದಿನ. ವೃತ್ತಿಕ್ಷೇತ್ರದಲ್ಲಿ ಪ್ರಗತಿ ಸಾಧಿಸುವಿರಿ. ಹಣ ಹೂಡಿಕೆಯಲ್ಲಿ ಲಾಭ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.
ವೃಷಭ
ವ್ಯವಹಾರದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆ ಕಾಣುವುದು. ಯೋಜಿಸಿದ ಕಾರ್ಯ ಕೈಗೂಡದು. ಕುಟುಂಬ ಸದಸ್ಯರ ಜತೆ ಆತ್ಮೀಯ ಕಾಲಕ್ಷೇಪ. ವೆಚ್ಚ ಅಧಿಕ.
ಮಿಥುನ
ನೀವು ಕೈಗೊಂಡಿರುವ ಕಾರ್ಯ ಕೆಲವು ವಿಘ್ನ ಎದುರಿಸುವುದು. ಹಾಗೆಂದು ಎದೆಗುಂದಬೇಕಿಲ್ಲ. ವಿಳಂಬವಾದರೂ ಕೆಲಸ ಕೈಗೂಡುವುದು.
ಕಟಕ
ನಿಮ್ಮ ಹಿತಾಸಕ್ತಿಗೆ ಪೂರಕವಾದ ಸೂಕ್ತ ನಿರ್ಧಾರ ತಾಳಿರಿ. ಇತರರು ಏನು ತಿಳಿದುಕೊಳ್ಳುವರೋ ಎಂಬ ಹಿಂಜರಿಕೆ ಬಿಟ್ಟುಬಿಡಿ.
ಸಿಂಹ
ನಿಮ್ಮ ಉತ್ತಮ ಕಾರ್ಯ ಇತರರಿಂದ ಗುರುತಿಸಲ್ಪಡುವುದು. ಕೌಟುಂಬಿಕ ಪರಿಸರದಲ್ಲಿ ನೆಮ್ಮದಿ. ಖರ್ಚು ಅಧಿಕ, ಆದರೆ ಅದರಿಂದ ಖುಶಿ ಹೆಚ್ಚು.
ಕನ್ಯಾ
ಮಹತ್ವದ ಉದ್ದೇಶ ಹೊಂದಿದ್ದೀರಿ. ಆದರೆ ಅದನ್ನು ಈಡೇರಿಸಲು ಸೂಕ್ತ ಸಹಾಯ, ಉತ್ತೇಜನ ದೊರಕುವುದಿಲ್ಲ. ಅದರಿಂದ ನಿರಾಶೆ.
ತುಲಾ
ಕೌಟುಂಬಿಕ ವಿಷಯದಲ್ಲಿ ಪ್ರಮುಖ ನಿರ್ಧಾರ ತಾಳುವ ಪ್ರಸಂಗ. ಕೆಲವರಿಗೆ ಅದು ಇಷ್ಟವಾಗದಿದ್ದರೂ ನೀವು ನಿರ್ಧಾರದಲ್ಲಿ ದೃಢವಾಗಿರಿ.
ವೃಶ್ಚಿಕ
ಅಧಿಕ ಕೆಲಸದ ಒತ್ತಡ.ಅದರ ಜತೆಗೇ ಇತರರೂ ನಿಮ್ಮ ಮೇಲೆ ಒತ್ತಡ ಹೇರುವರು. ಸಂಗಾತಿ ಜತೆಗೆ ಸೌಹಾರ್ದ ಸಂಬಂಧ ಕಾಯ್ದುಕೊಳ್ಳುವಿರಿ.
ಧನು
ಅಡ್ಡಿಗಳ ನಿವಾರಣೆ. ಕಾರ್ಯಗಳು ಸುಲಭ. ಖಾಸಗಿ ಬದುಕಿನಲ್ಲಿ ಸಂತೋಷದ ಬೆಳವಣಿಗೆ. ದೂರವಾಗಿದ್ದ ಆತ್ಮೀಯರು ಹತ್ತಿರವಾಗುವರು.
ಮಕರ
ಆತಂಕ, ಅಸುರಕ್ಷತೆಯ ಭಾವನೆ ಕಾಡುವುದು. ಇದರಿಂದ ಮನಸ್ಸಿಗೆ ಒತ್ತಡ. ಆರೋಗ್ಯದ ಮೇಲೂ ಪರಿಣಾಮ. ದಿನದಂತ್ಯಕ್ಕೆ ಎಲ್ಲ ನಿರಾಳವಾಗುವುದು.
ಕುಂಭ
ಆರ್ಥಿಕವಾಗಿ ಉತ್ತಮ ದಿನ. ಧನಲಾಭ. ಕಾರ್ಯದಲ್ಲಿ ಹೆಚ್ಚು ಉತ್ಸಾಹ. ಆಪ್ತರಿಂದ ಉತ್ತೇಜನ. ನೌಕರರಿಗೆ ಉದ್ಯೋಗದಲ್ಲಿ ಉನ್ನತಿ ದೊರಕುವುದು.
ಮೀನ
ಕೌಟುಂಬಿಕ ಬದುಕಿನಲ್ಲಿ ಗೊಂದಲ ಸೃಷ್ಟಿ. ಅದಕ್ಕೆ ನೀವೇ ಪರಿಸ್ಥಿತಿ ತಪ್ಪರ್ಥ ಮಾಡಿಕೊಳ್ಳುವುದು ಕಾರಣವಾಗುತ್ತದೆ. ವಿವೇಚನೆಯಿಂದ ವರ್ತಿಸಿದರೆ ಸುಗಮ.