ಹೊಸದಿಗಂತ ವರದಿ ಕುಶಾಲನಗರ:
ಅಖಂಡ ಭಾರತ ಸಂಕಲ್ಪ ದಿನದ ಅಂಗವಾಗಿ ಸೋಮವಾರ ರಾತ್ರಿ ಕುಶಾಲನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು.
ಕುಶಾಲನಗರದ ಬೈಚನಹಳ್ಳಿ ಮಾರಿಯಮ್ಮ ದೇವಾಲಯದಿಂದ ಹೊರಟ ಪಂಜಿನ ಮೆರವಣಿಗೆ ಮುಖ್ಯ ರಸ್ತೆ ಮೂಲಕ ಸಾಗಿ ರಥಬೀದಿ, ಹಳೆಯ ಮಾರುಕಟ್ಟೆ ರಸ್ತೆ ನಂತರ ಟೌನ್ ಕಾಲೋನಿ ರಸ್ತೆಯಿಂದಾಗಿ ಐ.ಬಿ ರಸ್ತೆ ಮೂಲಕ ರೈತ ಸಹಕಾರ ಭವನದಲ್ಲಿ ಸಮಾಪ್ತಿಗೊಂಡಿತು.