20 ವರ್ಷಗಳ ಬಳಿಕ ಮಣಿಪುರದಲ್ಲಿ ಹಿಂದಿ ಸಿನಿಮಾ ಪ್ರದರ್ಶನ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗಲಭೆ ಪೀಡಿತ ಮಣಿಪುರದಲ್ಲಿ ಸುಮಾರು 20 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಹಿಂದಿ ಸಿನಿಮಾ ಪ್ರದರ್ಶಿಸಲಾಗುತ್ತಿದೆ. ಸ್ವಾತಂತ್ರ್ಯ ದಿನದ ಅಂಗವಾಗಿ ಮಂಗಳವಾರ ಸಂಜೆ ಹಿಂದಿ ಸಿನಿಮಾ ಪ್ರದರ್ಶಿಸಲು ಬುಡಕಟ್ಟು ಸಂಘಟನೆಯ ‘ಹಮರ್‌ ವಿದ್ಯಾರ್ಥಿಗಳ ಸಂಘ’ ನಿರ್ಧರಿಸಿದ್ದು, ಆದರೆ ತೆರೆ ಕಾಣುವ ಸಿನಿಮಾ ಯಾವುದು ಎಂಬುದರ ಬಗ್ಗೆ ಬಹಿರಂಗಪಡಿಸಿಲ್ಲ.

ಚುರಚಂದಪುರ ಜಿಲ್ಲೆಯ ರೆಂಗಕೈ (ಲಮ್ಕಾ)ದಲ್ಲಿ ಸಿನಿಮಾ ಪ್ರದರ್ಶನ ಆಯೋಜಿಸಲಾಗಿದೆ.

ಕೊನೆಯ ಬಾರಿ 1998ರಲ್ಲಿ ಸಾರ್ವಜನಿಕವಾಗಿ ‘ಕುಚ್‌ ಕುಚ್ ಹೋತಾ ಹೈ’ ಸಿನಿಮಾ ಪ್ರದರ್ಶಿಸಲಾಗಿತ್ತು ಎಂದು ವಿದ್ಯಾರ್ಥಿಗಳ ಸಂಘ ಹೇಳಿದೆ. ಸ್ವಾತಂತ್ರ್ಯ ದಿನವನ್ನು ನಿಷೇಧಿಸಿದ ದೇಶ ವಿರೋಧಿ ಉಗ್ರ ಸಂಘಟನೆಗಳಿಂದ ಸ್ವತಂತ್ರವನ್ನು ನಾವು ಘೋಷಿಸಿದ್ದೇವೆ ಎಂದು ಸಂಘ ಹೇಳಿಕೆಯಲ್ಲಿ ತಿಳಿಸಿದೆ.

ಸೆಪ್ಟೆಂಬರ್‌ 2000ರಲ್ಲಿ ಬಂಡಾಯವೆದ್ದ ‘ರೆವಲ್ಯೂಷನರಿ ಪೀಪಲ್ಸ್‌ ಫ್ರಂಟ್‌’ ಸಂಘಟನೆಯು ಹಿಂದಿ ಸಿನಿಮಾ ಪ್ರದರ್ಶನಕ್ಕೆ ನಿರ್ಬಂಧ ಹೇರಿತ್ತು. ಅಲ್ಲದೆ 6 ರಿಂದ 8 ಸಾವಿರದಷ್ಟು ವಿಡಿಯೊ ಮತ್ತು ಆಡಿಯೊ ಕ್ಯಾಸೆಟ್‌ಗಳನ್ನು ಸುಟ್ಟುಹಾಕಲಾಗಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!