ದನ ತೊಳೆಯಲು ಹೋಗಿದ್ದ ಇಬ್ಬರು ಬಾಲಕರು ನೀರುಪಾಲು: ಇಬ್ಬರು ಪಾರು

ಹೊಸ ದಿಗಂತ ವರದಿ, ಗದಗ :

ಹೊಂಡದಲ್ಲಿ ನಿಂತಿದ್ದ ನೀರಿನಲ್ಲಿ ದನ ತೊಳೆಯಲು ಹೋದ ನಾಲ್ವರಲ್ಲಿ ಇಬ್ಬರು ನೀರು ಪಾಲಾಗಿದ್ದು ಇನ್ನಿಬ್ಬರನ್ನು ರಕ್ಷಣೆ ಮಾಡಿದ ಘಟನೆ ನಗರದ ಹೊರವಲಯದ ರೆಹಮತ್ ನಗರದಲ್ಲಿ ಮಂಗಳವಾರ ನಡೆದಿದೆ.

ಬಡಾವಣೆ ಬಳಿಯ ನೀರಿನ ಹೊಂಡದಲ್ಲಿ ದನ ತೊಳೆಯುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದ ಮೊಹಮ್ಮದ್ ಅಮನ್ ಹುಬ್ಬಳ್ಳಿ 12, ಸಂತೋಷ ಕುಂಬಾರ 14 ಮೃತಪಟ್ಟ ದುರ್ದೈವಿಗಳಾಗಿದ್ದಾರೆ. ಇದೇ ಸಂದರ್ಭದಲ್ಲಿ ಅದೇ ಮಾರ್ಗವಾಗಿ ನಡೆದುಕೊಂಡು ಹೋಗುತ್ತಿದ್ದ ರಾಜ್‌ಸಿಂಗ್ ಎಂಬುವರು ನಾಲ್ವರು ನೀರಿಗೆ ಬಿದ್ದಿದ್ದನ್ನು ನೋಡಿ ಮೊಹಮ್ಮದ್ ಆದಿಲ್ ಹುಬ್ಬಳ್ಳಿ 14, ಮಹಿಳೆ ಶಾಹೀನ್ ಹುಬ್ಬಳ್ಳಿ 30 ಅವರನ್ನು ರಕ್ಷಣೆ ಮಾಡಿದ್ದಾರೆ.

ನೀರು ಪಾಲಾದ ಇಬ್ಬರು ಬಾಲಕರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಶೋಧ ಕಾರ್ಯ ನಡೆದಿದೆ. ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!