ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ವಿಜಯ್ ದೇವರಕೊಂಡ ಹಾಗೂ ಸಮಂತಾ ಅಭಿನಯದ ಖುಷಿ ಇನ್ನೇನು ಸದ್ಯದಲ್ಲೇ ತೆರೆಕಾಣಲಿದೆ.
ಸಿನಿಮಾ ಪ್ರಮೋಷನ್ಸ್‌ನಲ್ಲಿ ಜೋಡಿ ಬ್ಯುಸಿಯಾಗಿದ್ದು, ಸಮಂತಾ ವಿಜಯ್‌ಗೆ ಎಂಥ ಹುಡುಗಿ ಬೇಕು ಎಂದು ಹೇಳಿದ್ದಾರೆ.
ವಿಜಯ್ ಭಾವೀ ಪತ್ನಿ ಸಾಮಾನ್ಯರಲ್ಲಿ ಸಾಮಾನ್ಯರಾಗಿರಬೇಕು, ತುಂಬಾ ಪ್ರೀತಿಸಬೇಕು, ಕುಟುಂಬದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದಿದ್ದಾರೆ.
ಖುಷಿ ಸಿನಿಮಾ ಕಥೆ ಕೇಳಿದ ವಿಜಯ್ ಈ ಪಾತ್ರಕ್ಕೆ ಸಮಂತಾ ಬೆಸ್ಟ್ ಎಂದು ಹೇಳಿದ್ದರು. ಅಂತೆಯೇ ಸಮಂತಾ ಕೂಡ ಕಥೆ ಒಪ್ಪಿಕೊಂಡಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಖುಷಿ ಜನರ ಮುಂದೆ ಬರಲಿದೆ.