ತ್ವಚೆ ತಿಳಿಯಾಗಿರಲಿ, ಮುಖದಲ್ಲಿ ಮೊಡವೆ ಇಲ್ಲದಿರಲಿ ಇದು ಹೆಚ್ಚುಕಡಿಮೆ ಎಲ್ಲ ಹೆಣ್ಣುಮಕ್ಕಳ ಆಸೆ, ಈಗೆಲ್ಲಾ ಬೆಳ್ಳಗೆ ಇರಬೇಕು ಎಂದಿಲ್ಲ ಆದರೆ ಕ್ಲಿಯರ್ ಸ್ಕಿನ್ ಬೇಕು ಎಂದು ಇಷ್ಟಪಡ್ತಾರೆ. ಎಷ್ಟೇ ದುಬಾರಿಯಾದ ಕ್ರೀಂಗಳನ್ನು ಹಚ್ಚಿದರೂ ಸ್ಕಿನ್ ಕ್ಲಿಯರ್ ಆಗೋದಿಲ್ಲ. ಏಕೆಂದ್ರೆ ಅದಕ್ಕೆ ಒಳಗಿನಿಂದಲೂ ಪೋಷಕಾಂಶಗಳು ಬೇಕಿವೆ. ಅಂದರೆ ನೀವೇನು ತಿನ್ನುತ್ತೀರಿ ಎನ್ನುವ ಬಗ್ಗೆ ಗಮನ ಇರಲಿ.. ಈ ಎಲ್ಲ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ಸ್ಕಿನ್ ನಿಮ್ಮದಾಗುತ್ತದೆ.
ಫ್ಯಾಟ್ ಇರುವ ಮೀನು, ಸಾಲ್‌ಮನ್, ಮಾಕೆರಲ್, ಹೆರಿಂಗ್ ಮೀನುಗಳನ್ನು ಸೇವಿಸಿ
ಬೆಣ್ಣೆಹಣ್ಣಿನ ಸೇವನೆ ಮಾಡಿ, ಇದರಲ್ಲಿ ಆರೋಗ್ಯಕರ ಫ್ಯಾಟ್ ಇದೆ
ವಾಲ್‌ನಟ್‌ನಿಂದ ಚರ್ಮ ಹಾಗೂ ಮೆದುಳಿಗೂ ಉಪಯೋಗ ಇದೆ.
ಸ್ನ್ಯಾಕ್ಸ್ ರೀತಿ ಸೂರ್ಯಕಾಂತಿ ಬೀಜಗಳನ್ನು ಸೇವಿಸಿ, ಇವು ನ್ಯೂಟ್ರಿಯಂಟ್ಸ್‌ಗಳನ್ನು ಒಳಗೊಂಡಿದೆ.
ಸಿಹಿಗೆಣಸಿನಲ್ಲಿ ಇರುವ ವಿಟಮಿನ್ ಎ ನಿಮ್ಮ ಚರ್ಮಕ್ಕೆ ಅತ್ಯಾವಶ್ಯಕ
ಕೆಂಪು, ಹಳದಿ ಬೆಲ್ ಪೆಪ್ಪರ‍್ಸ್ ಸೇವಿಸಿ, ಇದರಲ್ಲಿ ಬೀಟಾ ಕೆರೋಟಿನ್ ಅಂಶವಿದೆ.
ಬ್ರೊಕೊಲಿಯಲ್ಲಿ ಝಿಂಕ್, ವಿಟಮಿನ್ ಎ ಹಾಗೂ ವಿಟಮಿನ್ ಸಿ ಇರುವುದರಿಂದ ಚರ್ಮ ಡ್ರೈ ಆಗುವುದನ್ನು ತಡೆಗಟ್ಟುತ್ತದೆ.
ಟೊಮ್ಯಾಟೊದಲ್ಲಿ ಕೂಡ ವಿಟಮಿನ್ ಸಿ ಇದೆ, ಮುಖ ಸುಕ್ಕುಗಟ್ಟುವುದನ್ನು ಟೊಮ್ಯಾಟೊ ತಡೆಯುತ್ತದೆ.