Sunday, October 1, 2023

Latest Posts

LIFE STYLE| ಮನೆ ಶುಚಿಯಾಗಿಲ್ಲವಾದರೆ ಮಾನಸಿಕ ನೆಮ್ಮದಿ ಹಾಳಾಗುತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಚೇರಿ ಕೆಲಸದಿಂದಲೋ..ಹೊರಗಡೆಯಿಂದ ಮನೆಗೆ ಬಂದ ಕೂಡಲೇ ಮನೆ ಸ್ವಚ್ಛವಾಗಿದ್ದರೆ ಮನಸಿಗೂ ನೆಮ್ಮದಿ. ಗಲೀಜಾಗಿ ಎಲ್ಲೆಂದರಲ್ಲೇ ವಸ್ತು, ಬಟ್ಟೆಗಳು ಬಿದ್ದಿದ್ದು, ನೋಡೋಕೆ ಚೆನಾಗಿಲ್ಲವಾದರೆ ಏನೋ ಕಿರಿಕಿರಿ ಎನಿಸುತ್ತದೆ. ನಿಮ್ಮ ಮನೆಯ ಸ್ವಚ್ಛತೆ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಚಿಕ್ಕ ಮಕ್ಕಳು ಆಟವಾಡಿದ ಬಳಿಕ ಅದನ್ನು ಸರಿಯಾಗಿ ಎತ್ತಿಡು ಎಂದು ಅಮ್ಮ ಮಗುವಿಗೆ ಹೇಳೋ ಮಾತಲ್ಲಿ ಒಂದು ಅರ್ಥವಿದೆ. ಮನೆಯಲ್ಲಿನ ವಸ್ತುಗಳು ಸ್ವಚ್ಛವಾಗಿದ್ದರೆ ಮನಸ್ಸಿಗೆ ಆನಂದವಾಗುತ್ತದೆ. ಸುತ್ತಮುತ್ತಲಿನ ವಾತಾವರಣ ಅಸ್ತವ್ಯಸ್ತಗೊಂಡರೆ ಮನಸ್ಸಿಗೆ ನೋವಾಗುತ್ತದೆ. ಹಾಗಿದ್ದಲ್ಲಿ, ಇದು ಒತ್ತಡ, ಆತಂಕ ಮತ್ತು ಏಕಾಗ್ರತೆಯ ಕೊರತೆಗೆ ಕಾರಣವಾಗಬಹುದು ಎಂದು ಮ್ಯಾನ್ಹ್ಯಾಟನ್ ಥೆರಪಿ ಮನಶ್ಶಾಸ್ತ್ರಜ್ಞ ಪೆಗ್ಗಿಲು ಹೇಳುತ್ತಾರೆ.

ಗಲೀಜು ಮನೆ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಮೊದಲು ನಿಮ್ಮ ನೆಚ್ಚಿನ ಪ್ರಮುಖ ಕೋಣೆಯನ್ನು ಆಯ್ಕೆ ಮಾಡಿ ಮತ್ತು ಅದನ್ನು ಸ್ವಚ್ಛಗೊಳಿಸಿ. ಅಡುಗೆಮನೆಯೊಂದಿಗೆ ಸ್ವಚ್ಛಗೊಳಿಸಲು ಪ್ರಾರಂಭಿಸುವುದು ಉತ್ತಮ. ನಂತರ ಹಾಸಿಗೆ ಕೊಠಡಿ ಇದು ಆರೋಗ್ಯಕರ ನಿದ್ರೆಯ ಅಭ್ಯಾಸಕ್ಕೆ ಕೊಡುಗೆ ನೀಡುತ್ತದೆ. ದಿನನಿತ್ಯದ ಕೆಲಸದಲ್ಲಿ ಕೆಲವು ವಸ್ತುಗಳು ಅಥವಾ ಬಟ್ಟೆಗಳು ರಾಶಿ ಬೀಳದಂತೆ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಂಡು ಕೆಲಸವನ್ನು ಕಡಿಮೆ ಮಾಡಿ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಎಲ್ಲಾ ಕಾರ್ಯಗಳನ್ನು ಒಂದೇ ಬಾರಿಗೆ ತೆಗೆದುಕೊಳ್ಳುವ ಬದಲು, ಪ್ರತಿದಿನ ಹಂತ ಹಂತವಾಗಿ ಕೆಲಸವನ್ನು ಮಾಡಿ. ಒಂದೇ ಬಾರಿಗೆ ಮಾಡಿದರೆ ಸುಸ್ತಾಗುತ್ತದೆ. ಮನೆಯನ್ನು ಶುಚಿಗೊಳಿಸುವುದು ನಮ್ಮ ಏಕಾಗ್ರತೆಯನ್ನು ಸುಧಾರಿಸುವುದಲ್ಲದೆ, ಸ್ವಚ್ಛವಾಗಿ ಕಾಣುವ ಸ್ಥಳದ ಬಗ್ಗೆ ನಮಗೆ ಉತ್ತಮ ಭಾವನೆ ನೀಡುತ್ತದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!