ಪ್ರಾಣವನ್ನೇ ಪಣಕ್ಕಿಟ್ಟು ತನ್ನ ಒಂದು ತಿಂಗಳ ಮಗುವನ್ನು ರಕ್ಷಿಸಿದ ತಾಯಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅಮ್ಮ ಎಂದರೆ ವಾತ್ಸಲ್ಯ..ಮಮತ..ಪ್ರೀತಿ..ಧೈರ್ಯ. ಅಮ್ಮನ ಬಗ್ಗೆ ಎಷ್ಟೇ ಹೇಳಿದರೂ ಜಗತ್ತಿನಲ್ಲಿ ಅಮ್ಮನಿಗಿಂತ ಉತ್ತಮ ಯೋಧ ಇಲ್ಲ. ನವಮಾಸ ಹೊತ್ತು ಹೆತ್ತು ಸಾಕುವ ತಾಯಿ ತನ್ನ ಮಕ್ಕಳಿಗೆ ಯಾವ ತೊಂದರೆಯಾದರೂ ಸಹಿಸುವುದಿಲ್ಲ. ಆದ್ದರಿಂದಲೇ ದೇವರು ಅವನ ಬದಲು ಅಮ್ಮನನ್ನು ಭೂಮಿಯಲ್ಲಿ ಸೃಷ್ಟಿಸಿದನೆಂದು ಹೇಳಲಾಗುತ್ತದೆ. ಕರುಳಿನ ಕೂಗಿಗಾಗಿ ತಾಯಿ ಯಾವ ಮಟ್ಟಿಗಾದರೂ ಹೋರಾಡುತ್ತಾಳೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಭಾನುವಾರ ಪಾಡೇರು ಘಾಟ್ ರಸ್ತೆ ಅಪಘಾತದಲ್ಲಿ ತಾಯಿಯೊಬ್ಬಳು ತನ್ನ ಮಗುವನ್ನು ರಕ್ಷಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಘಟನೆ ನಡೆದಿದೆ.

ಅಲ್ಲೂರಿ ಸೀತಾರಾಮರಾಜು ಜಿಲ್ಲೆಯ ಪಾಡೇರು ಘಾಟ್ ರಸ್ತೆಯಲ್ಲಿ ಆರ್‌ಟಿಸಿ ಬಸ್ ಆಕಸ್ಮಿಕವಾಗಿ 50 ಅಡಿ ಕಮರಿಗೆ ಜಾರಿದ ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನ ನಡೆದ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

ಇದೇ ವೇಳೆ.. ತಾಯಿಯೊಬ್ಬಳು ತನ್ನ ಒಂದು ತಿಂಗಳ ಮಗುವನ್ನು ಉಳಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾಳೆ. ತಾಯಿಯ ಪ್ರೀತಿ ಏನೆಂಬುದು ಮತ್ತೊಮ್ಮೆ ಸಾಬೀತಾಗಿದೆ. ಆ ಬಸ್ಸು 50 ಒಂದಷ್ಟು ಅಡಿ ಆಳಕ್ಕೆ ಬಿದ್ದರೂ ತಾಯಿ ಮಗುವನ್ನು ಬಿಡಲಿಲ್ಲ. ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರೂ ಮಗುವಿನ ಮೈಮೇಲೆ ಒಂದು ಸಣ್ಣ ಗಾಯವೂ ಆಗದಂತೆ ಕಾಪಾಡಿಕೊಂಡಿದ್ದಾಳೆ. ಈ ಘಟನೆ ಈಗ ಸಖತ್‌ ವೈರಲ್‌ ಆಗುತ್ತಿದ್ದು, ಅಮ್ಮ ಯಾವತ್ತಿದ್ರೂ ಅಮ್ಮನೇ ಎಂಬ ಕಮೆಂಟ್‌ಗಳು ಬರುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!