ಪ್ರತೀ ದಿನ ಹಲ್ಲು ಉಜ್ತೀನಿ, ಸ್ನಾನ ಮಾಡ್ತೀನಿ ನಾನು ಹೈಜೀನ್ ಆಗಿ ಇದ್ದೇನೆ ಎಂದರೆ ಇದು ಉತ್ತಮ ನೈರ್ಮಲ್ಯ ಎಂದು ಹೇಳೋಕಾಗೋದಿಲ್ಲ. ಸೂಕ್ಷ್ಮಾಣುಗಳ ಹರಡುವಿಕೆಯಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಟಾಯ್ಲೆಟ್ ಹೈಜಿನ್ ಮುಖ್ಯ.. ಯಾವೆಲ್ಲಾ ಅಂಶಗಳನ್ನು ಗಮನದಲ್ಲಿಡಬೇಕು ನೋಡಿ..
- ಪ್ರತೀ ಬಾರಿ ವಾಶ್‌ರೂಂಗೆ ಹೋಗಿ ಬಂದಮೇಲೆ ಸೋಪ್ ಹಾಕಿ ಕೈ ತೊಳೆಯಬೇಕು.
- ತುಂಬ ಕುಟುಂಬ ನಿಮ್ಮದಾಗಿದ್ದರೆ ಎಲ್ಲರೂ ನೈರ್ಮಲ್ಯ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು.
- ವೆಟ್ ವೈಪ್ಸ್ ಅಥವಾ ಟಿಶ್ಯೂ ಬಳಕೆ ಮಾಡುವುದಾದರೆ ಯಾವಾಗಲೂ ಮುಂದಿನಿಂದ ಹಿಂದಿನವರೆಗೆ ಒರೆಸಿಕೊಳ್ಳಿ. ಹಿಂದಿನಿಂದ ಮುಂದಿನವರೆಗೆ ಒರೆಸಿದರೆ ಯುರಿನರಿ ಇನ್ಫೆಕ್ಷನ್ ಆಗುತ್ತದೆ.
- ಬಳಕೆ ಮಾಡುವ ಮುನ್ನ ಟಾಯ್ಲೆಟ್ ಸೀಟ್‌ನ್ನು ಒರೆಸಿ
- ಅದರಲ್ಲಿಯೂ ಪಬ್ಲಿಕ್ ಬಾತ್‌ರೂಂ ಬಳಕೆ ಮಾಡುವಾಗ ಸೀಟ್ ಒರೆಸದೆ ಕೂರಬೇಡಿ, ರೋಗಗಳಿರುವ ವ್ಯಕ್ತಿಗಳು ಮೂತ್ರ ವಿಸರ್ಜನೆ ಮಾಡಿರಬಹುದು.
- ಫ್ಲಶ್ ಮಾಡುವ ಮುನ್ನ ಲಿಡ್ ಮುಚ್ಚಬೇಕು.
- ಕಮೋಡ್ ಬಳಕೆ ನಂತರ ಫ್ಲಶ್ ಮಾಡಿದ್ದೀರಾ? ಮಾಡಿದ್ದು ಸರಿಯಾಗಿದೆಯೇ ಗಮನ ಇಡಿ.
- ವಾರಕ್ಕೊಮ್ಮೆ ಟಾಯ್ಲೆಟ್ ತೊಳೆಯಬೇಕು