ಇಂದಿನಿಂದ ನಮ್ಮ ಮೆಟ್ರೋದಲ್ಲಿ ನ್ಯಾಷನಲ್ ಕಾಮನ್‌ ಮೊಬಿಲಿಟಿ ಕಾರ್ಡ್‌ ಲಭ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ನಮ್ಮ ಮೆಟ್ರೋದಲ್ಲಿ ಒನ್ ನೇಷನ್‌ ಒನ್ ಕಾರ್ಡ್‌ ಅನುಗುಣವಾಗಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್‌ಗೆ ಇಂದು ಬಿಎಂಆರ್‌ಸಿಎಲ್‌ ಚಾಲನೆ ನೀಡಿದೆ. ಇಂದಿನಿಂದ ನಮ್ಮ ಮೆಟ್ರೋದ ಎಲ್ಲಾ ನಿಲ್ದಾಣಗಳಲ್ಲಿಯೂ ನ್ಯಾಷನಲ್ ಕಾಮನ್‌ ಮೊಬಿಲಿಟಿ ಕಾರ್ಡ್‌ ಲಭ್ಯವಾಗಲಿದೆ.

ಎನ್‌ಸಿಎಂಸಿ ಕಾರ್ಡ್ ಅನ್ನು ದೇಶದ ಎಲ್ಲ ಸಾರಿಗೆ, ಪೆಟ್ರೋಲ್ ಬಂಕ್‌, ಎಲ್ಲ ಮೆಟ್ರೋ ಸಾರಿಗೆ ಮತ್ತು ಮಾಲ್‌ಗಳಲ್ಲಿ ಬಳಸಬಹುದಾಗಿದೆ.

ಎನ್.ಸಿ.ಎಂ.ಸಿ. ಕಾರ್ಡ್ ಗಳಿಗೆ 50 ರೂಪಾಯಿ ದರವಿದ್ದು, ಸ್ಮಾರ್ಟ್ ಕಾರ್ಡ್ ರೀತಿಯಲ್ಲಿ ಪ್ರಯಾಣದ ಶೇಕಡ 5 ರಷ್ಟು ರಿಯಾಯಿತಿ ಕೂಡ ಸಿಗಲಿದೆ. ಈ ಮೂಲಕ ನಮ್ಮ ಮೆಟ್ರೋ ಪ್ರಯಾಣಿಕರ ಹಲವು ವರ್ಷಗಳ ಕನಸು ನನಸಾಗಿದೆ.

ಪ್ರಯಾಣಿಕರು ಈ ಕಾರ್ಡ್ ಅನ್ನು ಪಡೆಯಲು nammametro.agsindia.com ವೆಬ್‌ಸೈಟ್ ಅಥವಾ BMRCL RBL Bank NCMC ಮೊಬೈಲ್ ಆಪ್ ನಲ್ಲಿ ಸ್ವಯಂ ನೋಂದಣಿ ಮಾಡಿಕೊಂಡು ನೋಂದಣಿ ಸಂಖ್ಯೆಯನ್ನು ಮೆಟ್ರೋ ಟಿಕೆಟ್ ಕೌಂಟರ್ ನಲ್ಲಿ ತೋರಿಸಬಹುದು. ಎನ್.ಸಿ.ಎಂ.ಸಿ. ಕಾರ್ಡ್ ಆರ್.ಬಿ.ಎಲ್. ಬ್ಯಾಂಕ್ ನ ಎಲ್ಲಾ ಶಾಖೆಗಳಲ್ಲೂ ಲಭ್ಯವಿರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!