ನಾಳೆ ಬೆಂಗಳೂರಿಗೆ ಪ್ರಧಾನಿ ಮೋದಿ, ಇಸ್ರೋ ವಿಜ್ಞಾನಿಗಳ ಭೇಟಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಸ್ರೋದ ಮಹತ್ತರ ಸಾಧನೆ, ಚಂದ್ರಯಾನ-೩ ಸಕ್ಸಸ್ ಆಗಿದೆ. ಇಡೀ ವಿಶ್ವವೇ ಭಾರತದತ್ತ ನೋಡುವಂತೆ ಇಸ್ರೋ ಮಾಡಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಪ್ರಧಾನಿ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಸದ್ಯ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನಲ್ಲಿ ನಡೆಯುತ್ತಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಿರುವ ಪ್ರಧಾನಿ ಮೋದಿ ನಾಳೆ ಸೀದ ಬೆಂಗಳೂರಿಗೆ ಬರಲಿದ್ದಾರೆ. ಬೆಂಗಳೂರಿಗೆ ಬಂದು ಇಸ್ರೋ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳ ಜತೆ ಮಾತುಕತೆ ನಡೆಸಲಿದ್ದಾರೆ.

ಎಚ್‌ಎಎಲ್ ವಿಮಾನ ನಿಲ್ದಾಣದಕ್ಕೆ ಪ್ರಧಾನಿ ಮೋದಿ ಬರಲಿದ್ದು, ಪ್ರಧಾನಿಗೆ ಅದ್ಧೂರಿ ಸ್ವಾಗತ ಕೋರಲು ಬಿಜೆಪಿ ಸಜ್ಜಾಗಿದೆ. ಬೆಳಗ್ಗೆ 4:30ರಿಂದ ಬೆಳಗ್ಗೆ9:30 ರವರೆಗೆ ಓಲ್ಡ್ ಏರ್‌ಪೋರ್ಟ್ ರೋಡ್, ಓಲ್ಡ್ ಮದ್ರಾಸ್ ರೋಡ್, ಕಬ್ಬನ್ ರೀಡ್, ಸಿವಿ ರಾಮನ್ ರೋಡ್, ಯಶವಂತಪುರ ಫ್ಲೈಓವರ್, ರಾಜ್‌ಭವನ್ ರೋಡ್ ಹಾಗೂ ಇನ್ನಿತರ ರಸ್ತೆಗಳ ಬಳಿ ಓಡಾಟ ಮಾಡುವವರು ಪರ್ಯಾಯ ರಸ್ತೆಗಳನ್ನು ಬಳಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!