ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಬಂಧಿಸಲಾಗಿತ್ತು, ತದನಂತರ 1.68 ಕೋಟಿ ರೂಪಾಯಿ ಬಾಂಡ್ ಮೇರೆಗೆ ಅವರನ್ನು ಬಿಡುಗಡೆ ಮಾಡಲಾಗಿದೆ.
ಚುನಾವಣಾ ಅಕ್ರಮದ ಆರೋಪದಲ್ಲಿ ರಾತ್ರೋರಾತ್ರಿ ಟ್ರಂಪ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. 2020ರ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು 18 ಜನರ ಜೊತೆ ಸೇರಿ ಸಂಚು ನಡೆಸಿದ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದಾರೆ.
ನಾನು ಯಾವುದೇ ತಪ್ಪು ಮಾಡಿಲ್ಲ, ನ್ಯಾಯಕ್ಕೆ ಈ ಘಟನೆ ಅಣಕ ಮಾಡಿದಂತಾಗಿದೆ. ಇಡೀ ಅಮೆರಿಕಕ್ಕೆ ಇದು ದುಃಖದ ದಿನ ಎಂದು ಟ್ರಂಪ್ ಬಂಧನದ ನಂತರ ಹೇಳಿದ್ದರು.
ಅಧಿಕಾರ ದುರ್ಬಳಕೆ, ಪಿತೂರಿ, ವಂಚನೆ ಸೇರಿದಂತೆ 13 ಪ್ರಕರಣಗಳು ಟ್ರಂಪ್ ವಿರುದ್ಧ ದಾಖಲಾಗಿದೆ. ಶೂರಿಟಿ ನಂತರ ಅಟ್ಲಾಂಟದ ಫುಲ್ಟನ್ ಕೌಂಟಿ ಜೈಲಿನಿಂದ ಟ್ರಂಪ್ ಬಿಡುಗಡೆಯಾಗಿದ್ದಾರೆ.