ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಂಜೆ ಸಮಯಕ್ಕೆ ಸ್ಕ್ಯಾಕ್ಸ್ ತಿನ್ನಬೇಕು ಅಂತ ಅನಿಸ್ತಿದ್ಯಾ ಹಾಗಿದ್ರೆ ಕೂಡಲೇ ಟ್ರೈ ಮಾಡಿ ವೆಜಿಟೇಬಲ್ ಚೀಸ್ ಸ್ಯಾಂಡ್‌ವಿಚ್.
ಬೇಕಾಗುವ ಸಾಮಾಗ್ರಿಗಳು:
* ಬಿಳಿ ಬ್ರೆಡ್ ತುಂಡುಗಳು
* ಚೀಸ್ ಸ್ಲೈಸ್‌ಗಳು
* ಈರುಳ್ಳಿ
* ಕ್ಯಾಪ್ಸಿಕಂ
* ಟೊಮೇಟೋ
* ಹಸಿಮೆಣಸು
* ಮೆಣಸಿನ ಹುಡಿ
* ಚಾಟ್ ಮಸಾಲಾ
* ಲಿಂಬೆ ರಸ
* ಉಪ್ಪು
* ಬೆಣ್ಣೆ
ಮಾಡುವ ವಿಧಾನ:
* ಒಂದು ಪಾತ್ರೆಯಲ್ಲಿ ಕತ್ತರಿಸಿರುವ ಈರುಳ್ಳಿ, ಕ್ಯಾಪ್ಸಿಕಂ, ಹಸಿಮೆಣಸು ಮತ್ತು ಟೊಮೇಟೋವನ್ನು ಜೊತೆಯಾಗಿ ಮಿಶ್ರ ಮಾಡಿಕೊಳ್ಳಿ.
* ಅದಕ್ಕೆ ಮೆಣಸಿನ ಹುಡಿ, ಲಿಂಬೆ ರಸ ಮತ್ತು ಉಪ್ಪು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿಕೊಂಡು ಪಕ್ಕದಲ್ಲಿಡಿ.
* ಈಗ ಬ್ರೆಡ್ ಬದಿಗಳನ್ನು ಕತ್ತರಿಸಿ. ಚೀಸ್‌ನ ಒಂದು ಸ್ಲೈಸ್ ಅನ್ನು ತೆಗೆದುಕೊಂಡು ಬ್ರೆಡ್ ಮೇಲೆ ಹರಡಿ.
* ಅದಕ್ಕೆ ವೆಜಿಟೇಬಲ್ ಮಿಕ್ಸ್ ಅನ್ನು ಸೇರಿಸಿ ಮತ್ತು ಬ್ರೆಡ್ ಸ್ಲೈಸ್‌ನಿಂದ ಮುಚ್ಚಿ.
ಇದೀಗ ಬ್ರೆಡ್‌ನ ಸುತ್ತಲೂ ಬೆಣ್ಣೆ ಸವರಿ ಗ್ರಿಡ್‌ನಲ್ಲಿಡಿ. ಉಳಿದ ಬ್ರೆಡ್ ಸ್ಲೈಸ್‌ಗೆ ಇದೇ ವಿಧಾನವನ್ನು ಅನುಸರಿಸಿ. ಬಿಸಿ ಬಿಸಿಯಾದ ಚೀಸ್ ಸ್ಯಾಂಡ್‌ವಿಚ್ ಅನ್ನು ಟೊಮೇಟೋ ಕೆಚಪ್‌ನೊಂದಿಗೆ ಸವಿಯಿರಿ.