ಚಂದ್ರಯಾನ-3 ಸಕ್ಸಸ್: ಇದೇ ಮೊದಲ ಬಾರಿಗೆ ಚಂದ್ರನ ಮೇಲಿನ ತಾಪಮಾನ ಬಹಿರಂಗಪಡಿಸಿದ ಪ್ರಗ್ಯಾನ್ ರೋವರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಚಂದ್ರಯಾನ 3 ಯಶಸ್ವಿ ಬಳಿಕ ಚಂದ್ರನ ಮೇಲೆ ಈಗಾಗಲೇ ಪ್ರಗ್ಯಾನ್ ರೋವರ್ ತನ್ನ ಕೆಲಸವನ್ನು ಶುರುಮಾಡಿದ್ದು, ಇದೀ ಕೆಲ ಸೂಕ್ಷ್ಮತೆಗಳ ಮಾಹಿತಿಯನ್ನು ರವಾನಿಸಿದೆ.
ಚಂದ್ರನ ಮೇಲೆ ಅಧ್ಯಯನ ನಡೆಸುತ್ತಿರುವ ಪ್ರಗ್ಯಾನ್ ರೋವರ್ ಇದೀಗ ತಾಪಮಾನ ಮಾಹಿತಿಯನ್ನು ಇಸ್ರೋಗೆ ಕಳುಹಿಸಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಚಂದ್ರನ ಮೇಲಿರುವ ತಾಪಮಾನದ ಮಾಹಿತಿ ಬಹಿರಂಗಗೊಂಡಿದೆ.

ಚಂದ್ರನ ಮೇಲಿರುವ ChaSTE ಪ್ಲೇಲೋಡ್ ವಿಕ್ರಮ್ ಲ್ಯಾಂಡರ್ ಸಹಾಯದಿಂದ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲಿನ ತಾಪಮಾನ ಎಷ್ಟಿದೆ? ಇದು ಯಾವ ರೀತಿ ಬದಲಾಗುತ್ತಿದೆ ಎಂಬುದರ ಮಾಹಿತಿಯನ್ನು ಬಹಿರಂಗಪಡಿಸಿದೆ.

ಪ್ರಗ್ಯಾನ್ ರೋವರ್ ಚಂದ್ರನ ದಕ್ಷಿಣ ಧ್ರುವದಲ್ಲಿರುವ ಮಣ್ಣಿನ ಕುರಿತು ಅಧ್ಯಯನ ಆರಂಭಿಸಿದೆ. ಇತ್ತ ವಿಕ್ರಮ್ ಲ್ಯಾಂಡರ್‌ನಲ್ಲಿ ಅಳವಡಿಸಿರು ಸೆನ್ಸಾರ್‌ಗಳು ದಕ್ಷಿಣ ಧ್ರುವದಲ್ಲಿನ ತಾಪಮಾನದ ಮಾಹಿತಿಯನ್ನು ರವಾನಿಸಿದೆ. ಚಂದ್ರನ ಮೇಲಿನ ಉಷ್ಣತೆ ಪ್ರಮಾಣ ತಿಳಿಯುವ ಹಲವು ದೇಶಗಳ ವಿಜ್ಞಾನಿಗಳ ಕುತೂಹಲಕ್ಕೆ ಇಸ್ರೋ ಉತ್ತರ ನೀಡಿದೆ. ವಿಕ್ರಮ್ ಲ್ಯಾಂಡರ್ ಸಹಾಯದಿಂದ ಚಂದ್ರನ ಮೇಲ್ಮಣ್ಣಿನ ತಾಪಮಾನ ಅಳೆದು ಮಾಹಿತಿ ನೀಡಿದೆ. ಈ ಕುರಿತು ಇಸ್ರೋ ಗ್ರಾಫ್ ಬಿಡುಗಡೆ ಮಾಡಿದೆ.

50 ಸೆಲ್ಸಿಯಸ್​ನಿಂದ 10 ಸೆಲ್ಸಿಯಸ್​ವರೆಗೆ ಹಗಲಿನ ತಾಪಮಾನ ಇದೆ ಎಂದು ಪ್ರಗ್ಯಾನ್ ರೋವರ್ ವರದಿ ಕಳುಹಿಸಿಕೊಟ್ಟಿದ್ದು, ಇದನ್ನು ಇಸ್ರೋ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿದೆ.

ಮೈನಸ್ 10 ಡಿಗ್ರಿ ಸೆಲ್ಸಿಯಸ್​ನಿಂದ 60 ಡಿಗ್ರಿವರೆಗೆ ತಾಪಮಾನ ಇದೆ ಎಂದು ರೋವರ್​ ಮಾಹಿತಿ ನೀಡಿದ್ದು, ಅದನ್ನು ಇಸ್ರೋ ಗ್ರಾಫ್ ಸಮೇತ ವಿವರಿಸಿದೆ. ಈ ಬಗ್ಗೆ ಟ್ವೀಟ್ ಮೂಲಕ ಹಂಚಿಕೊಂಡಿರುವ ಇಸ್ರೋ, ಚಂದ್ರನ ದಕ್ಷಿಣ ಧೃವದಲ್ಲಿ ಪ್ರಗ್ಯಾನ್ ರೋವರ್ ಸಂಚರಿಸುತ್ತಿದ್ದು, ಇದೀಗ ಸೆನ್ಸಾರ್​​ಗಳ ಮೂಲಕ ಚಂದ್ರನ ತಾಪಮಾನ ಪರೀಕ್ಷೆ ಮಾಡಿದೆ. 10 ಸೆನ್ಸಾರ್ಸ್​ಗಳು ಚಂದ್ರನ 10 ಸೆ.ಮೀ ಆಳಕ್ಕೆ ಇಳಿದಿವೆ ಎಂದು ಇಸ್ರೋ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!