ಸೂರ್ಯನ ಕಡೆ ಭಾರತದ ಹೆಜ್ಜೆ: ಆದಿತ್ಯ ಎಲ್‌-1 ಉಡಾವಣೆಗೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಂದ್ರಯಾನ ೩ ವಿಕ್ರಮ್‌ ಲ್ಯಾಂಡರ್‌ ಯಶಸ್ವಿಯಾಗಿ ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಆಗಿದ್ದು, ಈ ಮೂಲಕ ಇಸ್ರೋ ವಿಶ್ವದಲ್ಲೇ ಸಾಧನೆ ಮಾಡಿದೆ.

ಇದೀಗ ಸೂರ್ಯನನ್ನು ಅವಲೋಕನ ಮಾಡುವ ನಿಟ್ಟಿನಲ್ಲಿ ಬ್ಯಾಹ್ಯಾಕಾಶ ಆಧಾರಿತ ಭಾರತೀಯ ವೀಕ್ಷಣಾಲಯವಾದ ಆದಿತ್ಯ ಎಲ್‌-1 ನೌಕೆಯನ್ನು ಕಳಿಸಿಕೊಡಲಿದ್ದು, ಈ ಯೋಜನೆಯ ಉಡಾವಣೆಯ ದಿನಾಂಕ ಹಾಗೂ ಸಮಯವನ್ನು ಇಸ್ರೋ ಪ್ರಕಟಿಸಿದೆ.

ಮುಂದಿನ ಶನಿವಾರ ಅಂದರೆ, ಸೆಪ್ಟೆಂಬರ್‌ 2 ಎಂದು ಆದಿತ್ಯ ಎಲ್‌-1 ನೌಕೆಯನ್ನು ಉಡಾವಣೆ ಮಾಡಲಿದ್ದೇವೆ ಎಂದು ಇಸ್ರೋ ತಿಳಿಸಿದೆ. ಬೆಳಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್‌ ಧವನ್‌ ಉಡಾವಣಾ ಕೇಂದ್ರದಿಂದ ಇದರ ಉಡಾವಣೆ ಮಾಡಲಾಗುವುದು ಎಂದು ಮಾಹಿತಿ ನೀಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!