GOOD FOOD | ಬಿಳಿ ಅಕ್ಕಿ ಹಾಲು ಬಾಯಿ ಹೀಗೆ ಮಾಡಿ

ಬೇಕಾಗುವ ಪದಾರ್ಥಗಳು:

ಬಿಳಿ ಅಕ್ಕಿ ಎರಡು ಕಪ್, ತೆಂಗಿನ ಕಾಯಿ ಒಂದು, ಬೆಲ್ಲ ಮುಕ್ಕಾಲು ಕೆಜಿ, ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ: ಬಿಳಿ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರಿನಲ್ಲಿ ನೆನೆಯಲು ಹಾಕಿ. ಎರಡು ಗಂಟೆಗಳ ಕಾಲ ನೆನೆಸಿಡಿ. ನೀರಿರುವ ತೆಂಗಿನ ಕಾಯಿಯನ್ನು ಒಡೆದು, ತುರಿದಿಟ್ಟುಕೊಳ್ಳಿ.

ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ನೀರು ಹಾಕಿ ನುಣ್ಣಗೆ ಅರೆದು ಹಾಲು ಹಿಂಡಿಟ್ಟುಕೊಳ್ಳಿ. ಅಕ್ಕಿಯನ್ನು ಮತ್ತೊಮ್ಮೆ ಚೆನ್ನಾಗಿ ತೊಳೆದು ದೋಸೆ ಹದಕ್ಕೆ ಕಡೆದಿಟ್ಟುಕೊಳ್ಳಿ. ಬೆಲ್ಲ, ಉಪ್ಪು, ತೆಂಗಿನ ಹಾಲು ಹಾಕಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಒಂದು ಬಾಣಲೆಯನ್ನು ಒಲೆಯ ಮೇಲೆ ಸಣ್ಣ ಉರಿಯಲ್ಲಿಟ್ಟು ಮಿಕ್ಸ್ ಮಾಡಿದ ಹಿಟ್ಟನ್ನು ಹಾಕಿ ಬೇಯಿಸಿ.

ಹಿಟ್ಟು ಸರಿಯಾಗಿ ಬೆಂದ ಬಳಿಕ (ತಳ ಬಿಡುವಂತೆ ನೋಡಿ) ಒಂದು ಪ್ರತ್ಯೇಕ ತಟ್ಟೆಗೆ ತುಪ್ಪ ಸವರಿ ಅದಕ್ಕೆ ಹಿಟ್ಟನ್ನು ಸುರಿದು ಹರಡಿ. ಮೇಲ್ಭಾಗದಲ್ಲಿ ತುಪ್ಪ ಹಾಕಿ ಹರವಿ. ಬೇಕಾದ ಆಕಾರದಲ್ಲಿ ಕತ್ತರಿಸಿ ತುಪ್ಪದೊಂದಿಗೆ ತಿನ್ನಲು ಬಲುರುಚಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!