ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹಭಾಷಾ ಗಾಯಕ ಅರ್ಮಾನ್ ಮಲಿಕ್ ತಮ್ಮ ಬಹುಕಾಲದ ಗೆಳತಿ ಆಶ್ನಾ ಶ್ರಾಫ್ (Aashna Shroff) ಜೊತೆ ಇಂದು (ಆಗಸ್ಟ್ 28) ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ.
ಈ ಕುರಿತ ಫೋಟೋಗಳನ್ನ ಸಿಂಗರ್ ಅರ್ಮಾನ್ ಹಂಚಿಕೊಂಡಿದ್ದಾರೆ.ಸಾಕಷ್ಟು ಸಮಯದಿಂದ ಆಶ್ನಾ- ಅರ್ಮಾನ್ ಡೇಟಿಂಗ್ ಮಾಡುತ್ತಿದ್ದರು. ಇದೀಗ ಗುರುಹಿರಿಯರ ಸಮ್ಮತಿಯ ಮೇರೆಗೆ ಈ ಜೋಡಿ ಎಂಗೇಜ್ ಆಗಿದ್ದಾರೆ.
ಗೆಳತಿ ಆಶ್ನಾಗೆ (Aashna Shroff) ಮಂಡಿಯೂರಿ ಬೆರಳಿಗೆ ಉಂಗುರ ತೊಡಿಸುತ್ತಿರುವ ಅರ್ಮಾನ್ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡ್ತಿದೆ.
ಮುಂಗಾರು ಮಳೆ 2 (Mungaru Male 2) ಚಿತ್ರದ ಸರಿಯಾಗಿ ನೆನಪಿದೆ ನನಗೆ ಸಾಂಗ್, ಚಕ್ರವರ್ತಿ ಚಿತ್ರದ ಒಂದು ಮಳೆಬಿಲ್ಲು, ಎಕ್ ಲವ್ ಯಾ ಚಿತ್ರದ ಯಾರೇ ಯಾರೇ ಸಾಂಗ್ ಸೇರಿದಂತೆ ಕನ್ನಡದ ಸಾಕಷ್ಟು ಹಾಡುಗಳಿಗೆ ಅರ್ಮಾನ್ ಧ್ವನಿಯಾಗಿದ್ದಾರೆ.