Monday, September 25, 2023

Latest Posts

ರಿಲಯನ್ಸ್ ಮಂಡಳಿಗೆ ನೀತಾ ಅಂಬಾನಿ ರಾಜೀನಾಮೆ: ಮಕ್ಕಳ ಹೆಗಲಿಗೆ ಹೊಸ ಜವಾಬ್ದಾರಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಿಲಯನ್ಸ್ ಇಂಡಸ್ಟ್ರೀ ಲಿಮಿಟೆಡ್ ಮಹತ್ವದ ನಿರ್ಧಾರ ಘೋಷಿಸಿದ್ದು, ಇಂದು ಮುಂಬೈನಲ್ಲಿ ನಡೆದ 46ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಬೋರ್ಡ್ ಸದಸ್ಯ ಸ್ಥಾನಕ್ಕೆ ನೀತಾ ಅಂಬಾನಿ ರಾಜೀನಾಮೆ ನೀಡಿದ್ದಾರೆ. ಇದೀಗ ಮಂಡಳಿಗೆ ಅಂಬಾನಿ ಮಕ್ಕಳಾದ ಇಶಾ, ಆಕಾಶ್ ಹಾಗೂ ಅನಂತ್ ಅಂಬಾನಿಯನ್ನು ಸೇರಿಸಲಾಗಿದೆ.

ನೀತಾ ಅಂಬಾನಿ ರಾಜೀನಾಮೆಯನ್ನು ರಿಲಯನ್ಸ್ ಇಂಡಸ್ಟ್ರೀ ಸ್ವೀಕರಿಸಿದೆ. ನೀತಾ ಅಂಬಾನಿ ರಿಲಯನ್ಸ್ ಇಂಡಸ್ಟ್ರಿ ಲಿಮಿಟೆಡ್ ಬೋರ್ಡ್ ಸಮಿತಿಗೆ ಮಾತ್ರ ರಾಜೀನಾಮೆ ನೀಡಿದ್ದಾರೆ. ರಿಲಯನ್ಸ್ ಫೌಂಡೇಶನ್‌ನ ಮುಖ್ಯಸ್ಥೆಯಾಗಿ ನೀತಾ ಅಂಬಾನಿ ಮುಂದುವರಿಯಲಿದ್ದಾರೆ ಎಂದು ರಿಲಯನ್ಸ್ ಸ್ಪಷ್ಟಪಡಿಸಿದೆ.

ರಿಲಯನ್ಸ್ ಫೌಂಡೇಶನ್ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಹಾಗೂ ಭಾರತದಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ನೀತಾ ಅಂಬಾನಿ ರಿಲಯನ್ಸ್ ಬೋರ್ಡ್ ಆಫ್ ಡೈರೆಕ್ಟರ್ಸ್‌ಗೆ ರಾಜೀನಾಮೆ ನೀಡಿದ್ದಾರೆ. ನೀತಾ ಅಂಬಾನಿ ತಮ್ಮ ಎಲ್ಲಾ ಶ್ರಮ ಹಾಗೂ ಶಕ್ತಿಯನ್ನು ಫೌಂಡೇಶನ್‌ಗೆ ಬಳಸಿಕೊಳ್ಳಲಿದ್ದಾರೆ. ನೀತಾ ಅಂಬಾನಿ ನಾಯಕತ್ವದಲ್ಲಿ ರಿಲಯನ್ಸ್ ಫೌಂಡೇಶನ್ ಮಹತ್ವದ ಮೈಲಿಗಲ್ಲು ಸ್ಥಾಪಿಸಿದೆ ಎಂದು ಮುಕೇಶ್ ಹೇಳಿದ್ದಾರೆ.

ಮುಕೇಶ್ ಅಂಬಾನಿ ಅವರ ಮಕ್ಕಳಾದ ಇಶಾ ಅಂಬಾನಿ, ಆಕಾಶ್ ಅಂಬಾನಿ ಮತ್ತು ಅನಂತ್ ಅಂಬಾನಿ ಅವರನ್ನು ಕಂಪೆನಿಯ ಕಾರ್ಯ ನಿರ್ವಾಹಕಯೇತರ (ನಾನ್ ಎಕ್ಸಿಕ್ಯೂಟಿವ್) ನಿರ್ದೇಶಕರನ್ನಾಗಿ ನೇಮಿಸಲು ಸೋಮವಾರ ನಡೆದ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್‌ಐಎಲ್) ನಿರ್ದೇಶಕರ ಮಂಡಳಿ ಶಿಫಾರಸು ಮಾಡಿದೆ. ಮಾನವ ಸಂಪನ್ಮೂಲ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸುಗಳನ್ನು ಪರಿಗಣಿಸಿರುವ ಮಂಡಳಿ, ಈ ಮೂವರ ನೇಮಕಾತಿಗಾಗಿ ಅನುಮೋದನೆ ನೀಡಲು ಶಿಫಾರಸು ಮುಂದಿಟ್ಟಿದೆ.

ಭಾರತದ ಮೇಲೆ ರಿಲಯನ್ಸ್ ಫೌಂಡೇಷನ್ ಮತ್ತಷ್ಟು ದೊಡ್ಡ ಮಟ್ಟದ ಪರಿಣಾಮ ಉಂಟುಮಾಡಲು ಸಾಧ್ಯವಾಗುವಂತೆ ಬೆಳೆಸಲು ಹಾಗೂ ಮಾರ್ಗದರ್ಶನ ನೀಡಲು ತಮ್ಮ ಉತ್ಸಾಹ ಹಾಗೂ ಸಮಯವನ್ನು ಮೀಸಲಿಡಲು ಬಯಸಿರುವ ನೀತಾ ಅಂಬಾನಿ ಅವರ ನಿರ್ಧಾರವನ್ನು ಗೌರವಿಸಿರುವ ನಿರ್ದೇಶಕರ ಮಂಡಳಿಯು, ಅವರ ರಾಜೀನಾಮೆಯನ್ನು ಸ್ವೀಕರಿಸಿದೆ. ರಿಲಯನ್ಸ್ ಫೌಂಡೇಷನ್‌ನ ಸಂಸ್ಥಾಪಕ ಅಧ್ಯಕ್ಷರಾಗಿ ನೀತಾ ಅಂಬಾನಿ ಅವರ ನಾಯಕತ್ವವನ್ನು ನಿರ್ದೇಶಕರ ಮಂಡಳಿ ಶ್ಲಾಘಿಸಿದೆ.

ರಿಲಯನ್ಸ್ ಫೌಂಡೇಷನ್ ನಿರ್ದೇಶಕರಾಗಿ ನೀತಾ ಅಂಬಾನಿ ಅವರು ಆರ್‌ಐಎಲ್‌ನ ಎಲ್ಲಾ ಮಂಡಳಿ ಸಭೆಗಳಲ್ಲಿ ಕಾಯಂ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಇದರಿಂದ ಕಂಪೆನಿಯು ಅವರ ಸಲಹೆಗಳ ಪ್ರಯೋಜನ ಪಡೆಯುವುದನ್ನು ಮುಂದುವರಿಸಲು ನೆರವಾಗಲಿದೆ ಎಂದು ರಿಲಯನ್ಸ್ ಹೇಳಿಕೆ ತಿಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!