ಚೆಸ್‌ ಸೂಪರ್‌ಸ್ಟಾರ್‌ ಪ್ರಜ್ಞಾನಂದನ ತಂದೆ-ತಾಯಿಗೆ ಮಹೀಂದ್ರಾ ಇವಿ ಕಾರ್‌ ನೀಡುವೆ ಎಂದ ಆನಂದ್‌ ಮಹೀಂದ್ರಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೆಸ್‌ ಸೂಪರ್‌ಸ್ಟಾರ್‌ ಆರ್‌.ಪ್ರಜ್ಞಾನಂದನಿಗೆ ಮಹೀಂದ್ರಾ & ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರು ವಿನೂತನ ಘೋಷಣೆ ಮಾಡಿದ್ದಾರೆ.

ಸ್ವತಃ ಅನಂದ್‌ ಮಹೀಂದ್ರಾ ಅವರೇ ಟ್ವಿಟರ್‌ನಲ್ಲಿ ಈ ಮಾಹಿತಿ ನೀಡಿದ್ದು, ಚೆಸ್‌ ವಿಶ್ವಕಪ್‌ನಲ್ಲಿ ರನ್ನರ್‌ಅಪ್‌ ಆಗಿರುವ ಪ್ರಜ್ಞಾನಂದನ ತಾಯಿ ಶ್ರೀಮಂತಿ ನಾಗಲಕ್ಷ್ಮೀ ಮತ್ತು ಅವರ ತಂದೆ ರಮೇಶ್‌ ಬಾಬು ಅವರಿಗೆ ಮಹೀಂದ್ರಾ ಎಕ್ಸ್‌ಯುವಿ 400 ಇವಿ ಕಾರ್‌ಅನ್ನು ಉಡುಗೊರೆ ನೀಡುವುದಾಗಿ ತಿಳಿಸಿದ್ದಾರೆ.

ಪ್ರಜ್ಞಾನಂದ ಚೆಸ್‌ ಲೋಕದಲ್ಲಿ ಇಷ್ಟು ದೊಡ್ಡ ಮಟ್ಟದ ಸಾಧನೆ ಮಾಡುವ ಹಿಂದೆ ಅವರ ತಂದೆಯ ತಾಯಿಯ ಅಚಲವಾದ ಸಮರ್ಪಣೆ, ಅವಿರತ ಬೆಂಬಲ ಹಾಗೂ ಪೋಷಣೆಯ ಮಾರ್ಗದರ್ಶನ ಸಹಕಾರಿಯಾಗಿದೆ ಎಂದು ಆನಂದ್‌ ಮಹೀಂದ್ರಾ ಅಭಿಪ್ರಾಯಪಟ್ಟಿದ್ದಾರೆ.

ತಮ್ಮ ಮಕ್ಕಳನ್ನು ಕ್ರೀಡೆಯ ಕಡೆಗೆ ಅದರಲ್ಲೂ ಬೋರ್ಡ್‌ ಗೇಮ್‌ಗಳ ಕಡೆಗೆ ಪೋಷಕರು ಪ್ರೇರೇಪಿಸಬೇಕು ಎನ್ನುವ ಉದ್ದೇಶವನ್ನೂ ಈ ರೀತಿ ಉಡುಗರೆ ನೀಡುತ್ತಿದ್ದೇನೆ ಎಂದಿದ್ದಾರೆ.

ಇಂದು ವಿಡಿಯೋ ಗೇಮ್‌ಗಳು ವ್ಯಾಪಕವಾಗಿ ಪ್ರಖ್ಯಾತಿ ಪಡೆದುಕೊಳ್ಳುತ್ತಿದೆ. ಈ ಸಮಯದಲ್ಲಿ ಚೆಸ್‌ನಂಥ ಕ್ರೀಡೆಗಳನ್ನು ಆಡುವ ನಿರ್ಧಾರ ಮಾಡಿದ ಮಕ್ಕಳಿಗೆ ಪ್ರೋತ್ಸಾಹ ನೀಡುವ ತಂದೆ-ತಾಯಿ ಕೂಡ ಶ್ಲಾಘನೆಗೆ ಅರ್ಹರು ಎಂದಿದ್ದಾರೆ. ಇದನ್ನು ಇವಿಗಳು ಪಡೆದುಕೊಳ್ಳುತ್ತಿರುವ ಪ್ರಖ್ಯಾತಿಯೊಂದಿಗೂ ಹೋಲಿಕೆ ಮಾಡಿ ಅರು ಟ್ವೀಟ್‌ ಮಾಡಿದ್ದಾರೆ.

‘ಇವಿ ಕಾರ್‌ಗಳಲ್ಲಿ ನಾವು ಗಮನ ನೀಡಿದ್ದರಿಂದ ಭವಿಷ್ಯದ ಉತ್ತಮ ಜಗತ್ತಿಗೆ ನಾವು ಹೂಡಿಕೆ ಮಾಡುತ್ತಿದ್ದೇವೆ. ಅದೇ ರೀತಿಯಲ್ಲಿ ನಾವು ಎಕ್ಸ್‌ಯುವಿ 400 ಇವಿಯನ್ನು ಪ್ರಜ್ಞಾನಂದ ಅವರ ತಾಯಿ ನಾಗಲಕ್ಷ್ಮೀ ಹಾಗೂ ಅವರ ತಂದೆ ರಮೇಶ್‌ ಬಾಬು ಅವರಿಗೆ ನೀಡಲಿದ್ದೇವೆ. ಅವರು ತಮ್ಮ ಮಗನ ಉತ್ಸಾಹವನ್ನು ಪೋಷಿಸಿದ್ದಕ್ಕಾಗಿ ಮತ್ತು ಅವರಿಗೆ ತಮ್ಮ ಅವಿರತ ಬೆಂಬಲವನ್ನು ನೀಡಿದ್ದಕ್ಕಾಗಿ ನಮ್ಮ ಕೃತಜ್ಞತೆಗೆ ಅರ್ಹರು’ ಎಂದು ಬರೆದುಕೊಂಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!