ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಿದ್ದಾರೆ.
ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಿಮೋಟ್ ಬಟನ್ ಒತ್ತುವ ಮೂಲಕ 2000 ರೂಪಾಯಿ ಚೆಕ್ ಪ್ರದರ್ಶನ ಮಾಡುವ ಮೂಲಕ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ಸಿಕ್ಕಿದೆ. ಇಂದಿನಿಂದಲೇ ಪ್ರತಿ ತಿಂಗಳು 2000 ರೂ ಹಣ ಮನೆ ಯಜಮಾನಿಯರ ಖಾತೆಗೆ ನೇರ ವರ್ಗಾವಣೆಯಾಗಲಿದೆ.
ಇದೇ ವೇಳೆ ಕಾಂಗ್ರೆಸ್ ಸರ್ಕಾರ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಸರ್ಕಾರದ ನೂರು ದಿನ ಆಡಳಿತದ ಪುಸ್ತಕವನ್ನು ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದರು. ಬಳಿಕ ಫಲಾನುಭವಿ ಮಹಿಳೆಯರಿಗೆ ಡಿಬಿಟಿ ಮೂಲಕ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಹಣ ವರ್ಗಾವಣೆ ಮಾಡಿದರು.
ವೇದಿಕೆಯ ಮೇಲೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ, ಎಐಸಿಸಿ ಜನರಲ್ ಸೆಕ್ರೆಟರಿ ವೇಣುಗೋಪಾಲ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಸಚಿವರಾದ ಮುನಿಯಪ್ಪ, ಪರಮೇಶ್ವರ್, ಸತೀಶ್ ಜಾರಕಿಹೋಳಿ, ಕೆ.ಎನ್. ರಾಜಣ್ಣ, ಮಹಾದೇವಪ್ಪ, ಚಲುವರಾಯಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Congress President Shri @kharge and Shri @RahulGandhi, along with Karnataka CM Shri @siddaramaiah & Deputy CM & KPCC President Shri @DKShivakumar inaugurate the Gruha Lakshmi Yojana today in Mysore, Karnataka.#CongressDeliversGuarantees
📍Mysore, Karnataka pic.twitter.com/HQ5q1NwkZA
— Congress (@INCIndia) August 30, 2023
#WATCH | Mysuru, Karnataka | Congress MP Rahul Gandhi transfers the amount into the bank accounts of the beneficiaries of Gruha Lakshmi Yojana, through direct benefit transfer (DBT).
The scheme was launched in the presence of Congress President Mallikarjun Kharge and him, here. pic.twitter.com/Be1XZ7Mddl
— ANI (@ANI) August 30, 2023